ಎಡನೀರು : ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಯ ಮಹಿಳಾ ಘಟಕದ ನೇತೃತ್ವದಲ್ಲಿ ಸುಖ ಶಾಂತಿ, ಆಯುಷ್ಯ ಆರೋಗ್ಯ ವೃದ್ಧಿಗಾಗಿ ಶ್ರಾವಣ ಮಾಸದ ಮಂಗಳವಾರ ಆಚರಿಸುವ ವ್ರತ "ಮಂಗಳ ಗೌರಿ "ಈ ಪುಣ್ಯ ಕಾರ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಪಾದಂಗಳವರು ತಮ್ಮ ದಿವ್ಯ ಹಸ್ತ ದಿಂದ ಬಿಡುಗಡೆಗೊಳಿಸಿ ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಈ ಸಂದರ್ಭದಲ್ಲಿ ಕಾಸರಗೋಡು ವಲಯ ಅಧ್ಯಕ್ಷರಾದ ಸತ್ಯನಾರಾಯಣ ತಂತ್ರಿ, UMBS ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಡಮಣ್ಣಾಯ ಕೇಂದ್ರ ಸಮಿತಿಯ ಸದಸ್ಯರಾದ ಮುರಳಿಧರ ಕಡಮಣ್ಣಾಯ, ಮಹಿಳಾ ಘಟಕದ ಅ ಧ್ಯಕ್ಷೆ ಸುಮಂಗಲ ತಂತ್ರಿ ಹಾಗೂ ಖಜಾಂಜಿಯಾದ ರಂಜಿನಿ ಹರೀಶ್ ಉಪಸ್ಥಿತರಿದ್ದರು.
0 Comments