Ticker

6/recent/ticker-posts

ಜುಗಾರಿ ಅಡ್ಡೆಗೆ ಬದಿಯಡ್ಕ ಪೊಲೀಸರ ದಾಳಿ, 7 ಮಂದಿಯ ಸೆರೆ, 9550 ರೂ.ವಶ


 ಬದಿಯಡ್ಕ: ನೆಲ್ಲಿಕಟ್ಟೆ ಬಳಿಯ ಚೂರಿಪಳ್ಳ ಮುಗಳಿಮೂಲೆಯಲ್ಲಿ ಪ್ಲಾಸ್ಟಿಕ್ ಶೀಟ್ ಕಟ್ಟಿ ಜುಗಾರಿ ಆಟವಾಡುತ್ತಿದ್ದ 7 ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 9550 ರೂ.ವಶಪಡಿಸಲಾಗಿದೆ.

ಮುಳಿಯಾರು ಪೊವ್ವಲ್ ನಿವಾಸಿ ಸತ್ತಾರ್(54), ಮಧೂರು ಬಳಿಯ ಕುಂಜಾರು ನಿವಾಸಿ ರಫೀಖ್(49), ಚೂರಿಪಳ್ಳ ನಿವಾಸಿ ಮನ್ಸೂರ್(43), ಅಣ್ಣು ನಾಯ್ಕ (40), ಮುಳಿಯಾರು ನೀರಮೂಲೆ ನಿವಾಸಿ ಬಾಲಕೃಷ್ಣ(62), ಮಾನ್ಯ ನಿವಾಸಿ ಮುಹಮ್ಮದ್(56),  ಚರ್ಲಡ್ಕ ಬಳಿಯ ಶರೀಫ್(41) ಬಂಧಿತರು. ನಿನ್ನೆ (ಗುರುವಾರ) ರಾತ್ರಿ 9 ಗಂಟೆಯ ವೇಳೆ ಬದಿಯಡ್ಕ ಎಸ್.ಐ.ಸುಮೇಶ್ ಬಾಬು ನೇತೃತ್ವದ ಪೊಲೀಸರ ತಂಡಕ್ಕೆ ರಾತ್ರಿ ಪಹರೆಯ ವೇಳೆ ಲಭಿಸಿದ ರಹಸ್ಯ ಮಾಹಿತಿಯಂತೆ ದಾಳಿ ನಡೆದಿತ್ತು. ದಾಳಿ ವೇಳೆ ಇಬ್ಬರು ಓಡಿ ಪರಾರಿಯಾಗಿದ್ದಾರೆ.

Post a Comment

0 Comments