Ticker

6/recent/ticker-posts

ಸಮಾಜದ ಸಾಧಕರನ್ನು ಅಭಿನಂದಿಸುವ ಮೂಲಕ ಆನೆಗುಂದಿ ಶ್ರೀಗಳ ಜನ್ಮ ವರ್ಧಂತ್ಯುತ್ಸವ ಸಂಭ್ರಮ


ಪಡುಕುತ್ಯಾರು : ಆನೆಗುಂದಿ ಶ್ರೀಗಳವರ ಜನ್ಮ ವರ್ಧಂತಿ ಆಂಗವಾಗಿ  ಶ್ರೀ ಗಣೇಶ ಅಥರ್ವಶಿರ್ಷ ಹೋಮ, ಪೂರ್ಣಮಾನ ನವಗ್ರಹ ಹೋಮ, ಶತರುದ್ರ ಯಾಗ,  ಮಹಾಮೃತ್ಯುಂಜಯ ಹೋಮ, ಶ್ರೀ ಧನ್ವಂತರೀ ಹೋಮ, ಶ್ರೀ ಮಹಾ ಸರಸ್ವತೀ ಯಜ್ಞ  ನಡೆಯಿತು. ನೇತೃತ್ವವನ್ನು ಬ್ರಹ್ಮಶ್ರೀ ಅಕ್ಷಯ ಶರ್ಮಾ ಕಟಪಾಡಿ ವಹಿಸಿದ್ದರು.

ಶಿಷ್ಯವೃಂದದವರಿಂದ ಜಗದ್ಗುರುಗಳವರ ತುಲಾಭಾರ ಸೇವೆ ನಡೆಯಿತು.

ಗುರುಪಾದುಕಾಪೂಜೆ  ನಡೆದ ಧರ್ಮ ಸಂಸತ್ತಿನಲ್ಲಿ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರು ಕಟಪಾಡಿ ಪಡುಕುತ್ಯಾರು ಆಶೀರ್ವಚನ ನೀಡಿದರು.

ಯುವ ಸಾಧಕರಿಗೆ ಗೌರವಾರ್ಪಣೆ ಭಾಗವಾಗಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವ ದಾಖಲೆಯ ವಿದ್ವಾನ್ ಶ್ರೀ ಎಂ.ಜಿ ಯಶವಂತ ಶರ್ಮ ಮೂಡಬಿದರೆ ಹಾಗೂ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡ ಸಾಗರ್ ಆಚಾರ್ಯ ಬೈಲೂರು ಕಾರ್ಕಳ ಅವರನ್ನು ಶಾಲು, ಅಭಿನಂದನಾ ಪತ್ರ ಫಲ ಪುಷ್ಪಗಳೊಂದಿಗೆ ಅಭಿನಂದಿ ಸಲಾಯಿತು.ಹಿನ್ನೆಲೆ ಕಲಾವಿದರಾದ 

ಶ್ರೀಮತಿ ವರ್ಷಾ ಆದರ್ಶ ಆಚಾರ್ಯ  ಮೂಡುಬಿದಿರೆ( ವೇಣುವಾದಕಿ )ಶ್ರೀ ಪ್ರಜ್ವಲ್ ಆಚಾರ್ಯ ಉಡುಪಿ (ತಬಲಾ ವಾದಕ) ಎಂಬಿವರನ್ನು ಇದೇ ವೇಳೆ ಅಭಿನಂದಿಸಲಾಯಿತು.ವಿದ್ವಾನ್ ಮೌನೇಶ ಶರ್ಮಾ , ವಿದ್ವಾನ್ ಪಂಚಮ ಶರ್ಮಾ ಅಭಿನಂದನಾ ಪತ್ರ ವಾಚಿಸಿದರು.  ವಿಶ್ವನಾಥ ಆಚಾರ್ಯ ಆಡಳಿತ ನಿರ್ದೇಶಕರು ಅಕ್ಷಯಾ ಜ್ಯುವೆಲ್ಲರ್ಸ್ ದೋಹಾ ಕತಾರ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಆಸ್ಥಾನ ವಿದ್ವಾಂಸರಾದ ಅಂತರಾಷ್ಟ್ರೀಯ ಜೋತಿಷ್ಯ ವಿದ್ವಾನ್ ಉಮೇಶ ಆಚಾರ್ಯ ಪಡೀಲು, ಹಿರಿಯ ವೈದಿಕ ವಿದ್ಯಾಂಸರಾದ ಬ್ರಹ್ಮಶ್ರೀ ಶ್ರೀಧರ ಶರ್ಮಾ ಕಟಪಾಡಿ, ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ  ಬಾರಕೂರು,ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷಪಿ.ವಿ ಗಂಗಾಧರ ಆಚಾರ್ಯ ಉಡುಪಿ,ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ ಅಧ್ಯಕ್ಷರು, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ರಿ) (ಅಸೆಟ್) ಪಡುಕುತ್ಯಾರು ಹಾಗೂ ಪ್ರಧಾನ ಸಂಚಾಲಕರು, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲಾ ಪಡುಕುತ್ಯಾರು,ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು  ಅಧ್ಯಕ್ಷರು, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪಡುಕುತ್ಯಾರು,ಶ್ರೀ ಸುಂದರ ಆಚಾರ್ಯ ಬೆಳುವಾಯಿ  ಅಧ್ಯಕ್ಷರು, ಆನೆಗುಂದಿ ಶ್ರೀ ಸರಸ್ವತೀ ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ) ಪಡುಕುತ್ಯಾರು,ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ  ಅಧ್ಯಕ್ಷೆ, ಶ್ರೀ ಸರಸ್ವತೀ ಮಾತೃ ಮಂಡಳಿ ಪಡುಕುತ್ಯಾರು, ವಿದ್ವಾನ್‌  ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು ಅಧ್ಯಕ್ಷರು ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಪಡುಕುತ್ಯಾರು  ಶ್ರೀ ಮುರಹರಿ ಆಚಾರ್ಯ, ಉಡುಪಿ ಆಡಳಿತ ಮೊಕ್ತೇಸರರು,ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ ,ಶಿಲ್ಪಿ ರಾಮಚಂದ್ರ ಆಚಾರ್ಯ, ಕಾರ್ಕಳ    ಆಡಳಿತ ಮೊಕ್ತೇಸರರು, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಕಾರ್ಕಳ ಶ್ರೀ ಚಂದ್ರಯ್ಯ ಆಚಾರ್ಯ ಕಳಿ ಆಡಳಿತ ಮೊಕ್ತೇಸರರು, ಶ್ರೀಕರಸ್ಥಳ ನಾಗಲಿಂಗಸ್ವಾಮೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ, ಉಪಾಧ್ಯಕ್ಷರು ಆನೆಗುಂದಿ ಪ್ರತಿಷ್ಠಾನ,ಶ್ರೀ ಬಾಲಕೃಷ್ಣ ಆಚಾರ್ಯ, ಮೂಡಬಿದ್ರೆ ಆಡಳಿತ ಮೊಕ್ತೇಸರರು, ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನ ಮೂಡಬಿದ್ರೆ,ಶ್ರೀ ಗಜಾನನ ಎನ್‌ ಆಚಾರ್ಯ, ನೀರಕಂಠ, ಶಿರಾಲಿ ಆಡಳಿತ ಮೊಕ್ತೇಸರರು ಶ್ರೀ ಕಾಳಿಕಾಂಬಾ ದೇವಸ್ಥಾನ ಭಟ್ಕಳ,ಶ್ರೀ ವೆಂಕಟ್ರಮಣ ಆಚಾರ್ಯ ಉಳುವಾರು  ಮೊಕ್ಷೇಸರರು,ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ಬಂಗ್ರಮಂಜೇಶ್ವರ,ಶ್ರೀ  ಜನಾರ್ದನ ಆಚಾರ್ಯ ಆರಿಕ್ಕಾಡಿ  ಅಧ್ಯಕ್ಷರು, ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನ ಆರಿಕ್ಕಾಡಿ ಕುಂಬಳೆ,ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಅಧ್ಯಕ್ಷರು, ಶ್ರೀ ಕಾಳಿಕಾಂಬಾ ಮಠ, ಮಧೂರು, ಉಪಾಧ್ಯಕ್ಷರು ಆನೆಗುಂದಿ ಪ್ರತಿಷ್ಠಾನ,ಶ್ರೀ ಬಿ.ಯೋಗೀಶ್‌ ಆಚಾರ್ಯ ಬೆಂಗಳೂರು, ಪ್ರಧಾನ ಕಾರ್ಯದರ್ಶಿ, ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ನಾಯಂಡರಹಳ್ಳಿ ಬೆಂಗಳೂರು,ಜಗದೀಶ್ ಆಚಾರ್ಯ ಅಧ್ಯಕ್ಷರು, ನಾಲ್ಕೂರು ಪಂಜುರ್ಲಿ ದೈವಸ್ಥಾನ ಪಡುಪಣಂಬೂರು,ಶ್ರೀ   ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು ಉಡುಪಿ  ಉಪಾಧ್ಯಕ್ಷರು ಆನೆಗುಂದಿ ಪ್ರತಿಷ್ಠಾನ, ಲೋಲಾಕ್ಷ ಶರ್ಮಾ ಪಡುಕುತ್ಯಾರು ಇವರು ಭಾಗವಹಿಸಿದ್ದರು.ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ,ಅಧ್ಯಕ್ಷರು, (ಆಡಳಿತ ಮೊಕ್ತೇಸರರು, ಶ್ರೀಕಾಳಿಕಾಂಬಾ ದೇವಸ್ಥಾನ ಬಾರ್ಕೂರು ) ವಹಿಸಿದ್ದರು.  ಶ್ರೀ ಲೋಕೇಶ್ ಎಂ.ಬಿ. ಆಚಾರ್, ಕಂಬಾರು ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಶ್ರೀ ಅರವಿಂದ  ವೈ ಆಚಾರ್ಯ ಬೆಳುವಾಯಿ ಕೋಶಾಧಿಕಾರಿ ವಂದಿಸಿದರು.

ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಗಾಗಿ  ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನ್ಯಾಯವಾದಿ ಕೆ.ಎಂ ಗಂಗಾಧರ ಕೊಂಡೆವೂರು ಹಾಗೂ ಶ್ರೀಮತಿ ಗೀತಾ ಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments