Ticker

6/recent/ticker-posts

ಗೆಳೆಯರ ಜತೆ ಮಾತಾಡುತ್ತಾ ಕುಳಿತಿದ್ದ ಯುವಕನನ್ನು ಕಾರಿನಲ್ಲಿ ಆಗಮಿಸಿದ ತಂಡ ಅಪಹರಣ; ಪೊಲೀಸರು ಹಿಂಬಾಲಿಸಿದಾಗ ಉಪೇಕ್ಷಿಸಿ ಪರಾರಿ


 ಮಂಜೇಶ್ವರ: ಗೆಳೆಯರ ಜತೆ ಮಾತಾಡುತ್ತಾ ಕುಳಿತಿದ್ದ ಯುವಕನನ್ನು ಕಾರಿನಲ್ಲಿ ಆಗಮಿಸಿದ ತಂಡ ಅಪಹರಿಸಿದ ಘಟನೆ ನಡೆದಿದೆ.  ಮಾಹಿತಿ ತಿಳಿದ ಪೊಲೀಸರು ಹಿಂಬಾಲಿಸಿದಾಗ ಕಾರು ಹಾಗೂ ಯುವಕನನ್ನು ಕಾಸರಗೋಡು ನಾಯನ್ಮಾರಮೂಲೆ ಬಳಿ ಉಪೇಕ್ಷಿಸಿ ತಂಡ ಪರಾರಿಯಾಗಿದೆ.

  ‌‌‌ಮಂಜೇಶ್ವರ ಗೇರುಕಟ್ಟೆ ಬಳಿಯ ಅಬೂಬಕರ್ ಸಿದ್ದಿಖ್ ಯಾನೆ ಸದ್ದಾಂ(33) ಅಪಹರಣಕ್ಕೀಡಾದ ವ್ಯಕ್ತಿ. ‌ನಿನ್ನೆ (ಬುದವಾರ) ರಾತ್ರಿ 8.30 ರ ವೇಳೆ ಈತ ಮಂಜೇಶ್ವರ ಗೋವಿಂದ ಪೈ ಕಾಲೇಜು ಬಳಿಯ ರಸ್ತೆ ಬದಿಯಲ್ಲಿ ಗೆಳೆಯರ ಜತೆ ಮಾತಾಡುತ್ತಿದ್ದಾಗ ಕಾರಿನಲ್ಲಿ ಆಗಮಿಸಿದ ತಂಡ ಸದ್ದಾಂನನ್ನು ಬಲವಂತವಾಗಿ ಹಿಡಿದು ಕಾರಿನೊಳಗೆ ಹಾಕಿ ಮುಂದಕ್ಕೆ ಸಾಗಿದೆ. ಈ ಬಗ್ಗೆ ಸದ್ದಾಂನ ಸಹೋದರಿ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು‌ ಅದರಂತೆ ಪೊಲೀಸರು ಹಿಂಬಾಲಿಸಿದಾಗ ನಾಯನ್ಮಾರಮೂಲೆಯಲ್ಲಿ ಕಾರು ಮತ್ತು ಸದ್ದಾಂನನ್ನು ಉಪೇಕ್ಷಿಸಿ ತಂಡ ಪರಾರಿಯಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ

Post a Comment

0 Comments