ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ 2025 ಅಂಗವಾಗಿ ಆಗಸ್ಟ್ 10 ರಂದು ಮಂಗಲ್ಪಾಡಿ ಮನೆಯ ಗದ್ದೆಯಲ್ಲಿ ನಡೆಯಲಿರುವ ಆಟಿದ ಕೂಟ ಕಾರ್ಯಕ್ರಮದ ಯಶಸ್ವಿಗೆ ಹಾಗೂ ನಾಯ್ಕಾಪಿನಲ್ಲಿ ನಿರ್ಮಾಣಗೊಳ್ಳಲಿರುವ ಬಂಟರ ಭವನ ಕಟ್ಟಡ ಸಮುಚ್ಚಯದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಕಾಸರಗೋಡಿನ ಬಂಟರ ಸಂಘದ ಪದಾಧಿಕಾರಿಗಳ ಸಭೆಯು ಕುಂಬಳೆ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಜರಗಿತು.
ಬಂಟರ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ, ಕೊಡುಗೈ ದಾನಿ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟರ ಭವನದ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಹಾಗೂ ಆಟಿದ ಕೂಟ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಯಶಸ್ವಿಗೊಳಿಸಲು ಕರೆ ನೀಡಿದರು. ಬಂಟರ ಭವನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ, ಕೊಡುಗೈ ದಾನಿ ಕೆ. ಕೆ. ಶೆಟ್ಟಿ ಕುತ್ತಿಕ್ಕಾರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದರು. ವಿಜಯ ಕುಮಾರ್ ರೈ ಮಲ್ಲಂಗೈ ಆಟಿದ ಕೂಟ ಕಾರ್ಯಕ್ರಮದ ಪೂರ್ವ ತಯಾರಿ ಮತ್ತು ವ್ಯವಸ್ಥೆಯ ಬಗ್ಗೆ ವಿವರಿಸಿದರು. ಅನ್ನಪೂರ್ಣ ರೈ ಕಿದೂರು ಪ್ರಾರ್ಥನೆ ಹಾಡಿದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳು, ಫಿರ್ಕಾ ಸಂಘದ ಪದಾಧಿಕಾರಿಗಳು, ಪಂಚಾಯತ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಕಾರ್ಯದರ್ಶಿ ಮೋಹನ ರೈ ಕಯ್ಯಾರು ಧನ್ಯವಾದ ಸಮರ್ಪಿಸಿದರು.
ಚಿತ್ರ: ಹರೀಶ್ ಆಳ್ವ ಉಜಾರು
0 Comments