Ticker

6/recent/ticker-posts

ಸಾಮಾಜಿಕ ಮಾದ್ಯಮಗಳಲ್ಲಿ ವಿ.ಎಸ್. ವಿರುದ್ದ ಅವಹೇಳನಕಾರಿ ಪೋಸ್ಟ್; ಕಾಸರಗೋಡು ಜಿಲ್ಲೆಯಲ್ಲಿ ಮೂರು ಮಂದಿಯ ವಿರುದ್ದ ಕೇಸು ದಾಖಲು‌.


 ಕಾಸರಗೋಡು:  ಅಗಲಿದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಅವರನ್ನು ಅವಹೇಳನಗೈದು  ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 3 ಕೇಸು ದಾಖಲಿಸಲಾಗಿದೆ. ಸಾಮಾಜಿಕ ಮಾದ್ಯಮಗಳ ಮೂಲಕ ರಾಜಕೀಯ, ಕೋಮು ಘರ್ಷಣೆ ನಡೆಸಲು ಹುನ್ನಾರ ಎಂಬ ರೀತಿಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
   ‌ಸಿಪಿಎಂ ಕುಂಬಳೆ ಲೋಕಲ್ ಕಾರ್ಯದರ್ಶಿ ಯೂಸೆಫ್ ನೀಡಿದ ದೂರಿನಂತೆ ಕೊಯ್ಪಾಡಿ ಪೆರುವಾಡ್ ನಿವಾಸಿ ಅಬ್ದುಲ್ಲ ಕುಞ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಳ್ಳಿಕ್ಕರೆ ನಿವಾಸಿ ಫೈಸು ವಿರುದ್ದ ಕೇಸು ದಾಖಲಿಸಲಾಗಿದೆ. ಈತ ವಿದೇಶದಲ್ಲಿ ಉದ್ಯೋಗಿಯಾಗಿದ್ದಾನೆ.  ವಿ.ಎಸ್.ಅಚ್ಚುತಾನಂದನ್ ರನ್ನು ಅವಮಾನಿಸುವ ರೀತಿಯ ವಾಟ್ಸಾಪ್ ಸ್ಟೇಟಸ್ ಹಾಕಿದ ಪಾಲಿಚ್ಚೋನ್ ನಿವಾಸಿ ರಶೀದ್ ಮೊಯ್ದೀನ್ ಎಂಬಾತನ ವಿರುದ್ದ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಘರ್ಷಣೆಗೆ ಕಾರಣವಾಗುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟುಗಳ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments