ಮುಂಡಿತ್ತಡ್ಕ: ಶ್ರೀ ವಿಷ್ಣು ಕಲಾವೃಂದ ವಿಷ್ಣು ನಗರ ಮುಂಡಿತ್ತಡ್ಕ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಹಿರಿಯ ಸದಸ್ಯ ಸುಂದರ ಯಸ್ ಕಟ್ನಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿತು. 2024-25ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧಿಕಾರಿಯಾದ ಪುಷ್ಪರಾಜ್ ಆಳ್ವ ಮಂಜಕೊಟ್ಟಿಗೆ ಮಂಡಿಸಿದರು.ಲೆಕ್ಕ ಪತ್ರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ತದನಂತರ ನೂತನ ಸಮಿತಿಯನ್ನು ರಚಿಸಲಾಯಿತು.2025-26 ನೇ ಸಾಲಿಗೆ ಅಧ್ಯಕ್ಷರಾಗಿ ಸುಂದರ ಯಸ್ ಕಟ್ನಡ್ಕ ಉಪಾಧ್ಯಕ್ಷರಾಗಿ ಶಶಿಕುಮಾರ್ ಅರಿಯಪ್ಪಾಡಿ , ರಾಮ ಮುಂಡಿತ್ತಡ್ಕ , ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಎರ್ಮೆತ್ತೊಟ್ಟಿ ,ಜೊತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ಮಾಸ್ತರ್ ಮುಜುಕುಮೂಲೆ, ಪ್ರವೀಣ್ ಸರಳಿ, ಕೋಶಾಧಿಕಾರಿಯಾಗಿ ಬಾಬು ಉಪ್ಪಿನೆ, ಕಲಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಆಳ್ವ ಮಂಜಕೊಟ್ಟಿಗೆ, ಕ್ರೀಡಾ ಕಾರ್ಯದರ್ಶಿಯಾಗಿ ಪುನೀತ್ ಎರ್ಮೆತ್ತೊಟ್ಟಿ, ಹಾಗೂ 25 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಹಿರಿಯ ಸದಸ್ಯರಾದ ಚಿದಾನಂದ ಆಳ್ವ ಮಂಜಕೊಟ್ಟಿಗೆ ಹಾಗೂ ರಾಮ್ ಕುಮಾರ್ ಮುಜುಕುಮೂಲೆ ಸಂಘದಲ್ಲಿ ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು. ಮಹಾವಿಷ್ಣು ಭಜನಾ ಸಂಘದ ಅಧ್ಯಕ್ಷರಾದ ಹರೀಶ್ ಮುಂಡಿತ್ತಡ್ಕ ಮತ್ತು ಶ್ರೀ ವಿಷ್ಣು ಮಹಿಳಾ ಸಂಘದ ಅಧ್ಯಕ್ಷೆ ದಿವ್ಯಶ್ರೀ ಮುಜುಕುಮೂಲೆ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ ಮಾಜಿ ಅಧ್ಯಕ್ಷ ಶ್ರೀ ಮೋಕ್ಷಿತ್ ಕುಮಾರ್ ವಂದಿಸಿದರು. ಭಜನಾ ಸಂಘದ ಜೊತೆ ಕಾರ್ಯದರ್ಶಿ ಸುನಿಲ್ ಮಾಸ್ತರ್ ನಿರೂಪಿಸಿದರು.
0 Comments