ಕಾಸರಗೋಡಿನಲ್ಲಿ ಕೆಎಸ್ಸಾರ್ಟಿಸಿ ಸ್ಥಗಿತ
ಪೇಟೆ ಪಟ್ಟಣ ನಿಶ್ವಲ
ಚಿತ್ರ : ಶ್ರೀಕಾಂತ್ ಕಾಸರಗೋಡು
ಕಾಸರಗೋಡು : ಕಾರ್ಮಿಕ ಸಂಹಿತೆಗಳ ಜಾರಿ ನಿಲ್ಲಿಸಿ ದುಡಿಯುವ ಜನರ ಸ್ವಾಯತ್ತತೆ ಕೆಣಕದಿರಿ ಎಂಬ ಘೋಷಣೆಯಡಿ ಕೇಂದ್ರ ಸರಕಾರದ ವಿರುದ್ಧ JCTU-SKM ಕರೆಯ ಮೇರೆಗೆ ಇಂದು ನಡಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಜನ ಜೀವನ ಅಸ್ತವ್ಯಸ್ತಗೊಳಿಸಿದೆ.ನಿನ್ನೆ ಮಧ್ಯರಾತ್ರಿಯಿಂದ ಆರಂಭಗೊಂಡ ರಾಷ್ಟ್ರೀಯ ಕೆಲಸ ಸ್ಥಗಿತ ಮುಷ್ಕರಕ್ಕೆ ಕಾಸರಗೋಡು ಜಿಲ್ಲೆಯ ಸಿಐಟಿಯು ಸಹಿತ ಪ್ರಮುಖ ಟ್ರೇಡ್ ಯೂನಿಯನ್ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದೆ.ಆದರೆ ಬಿಎಂಎಸ್ ಸಂಘಟನೆ ಮಾತ್ರ ಇಂದಿನ ಮುಷ್ಕರಕ್ಕೆ ಬೆಂಬಲ ನೀಡಿಲ್ಲ.
ಕಾಸರಗೋಡಿನಲ್ಲಿ ಕೆಎಸ್ಸಾರ್ಟಿಸಿ ಸ್ಥಗಿತ :
ಕೇರಳ ಕೆಎಸ್ಸಾರ್ಟೀಸಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸೂಚಿಸಿದ್ದರು ಕಾಸರಗೋಡಿನ ಡಿಪ್ಪೊದಿಂದ ಯಾವುದೇ ಬಸ್ ಸಂಚಾರಕ್ಕಿಳಿಯಲಿಲ್ಲ. ಖಾಸಗೀ ಬಸ್ಸುಗಳು ನಿನ್ನೆ ತಮ್ಮ ಸಂಘಟನಾತ್ಮಕ ಮುಷ್ಕರ ನಡೆಸಿದ್ದು ಇಂದು ಸಹ ಬಂದ್ ಗೆ ಬೆಂಬಲ ನೀಡಿ ರಸ್ತೆಗಿಳಿಯಲಿಲ್ಲ. ಕೆಲವೊಂದು ಟ್ಯಾಕ್ಸಿ ಸಹಿತ ಸ್ವಂತ ವಾಹನಗಳೇ ಇಂದಿನ ಪ್ರಯಾಣಿಕರಿಗೆ ಏಕ ಆಶ್ರಯವಾಗಿದೆ.
ಶಾಲೆ ಹಾಗೂ ಸರ್ಕಾರಿ ಕಚೇರಿ, ಸೇವಾ ವಿಭಾಗದಲ್ಲಿ ಸಹಜವಾಗಿಯೇ ಹಾಜರಾತಿ ಕಡಿಮೆಗೊಂಡಿದೆ.
ಬಂದ್ ನ ಬಗ್ಗೆ ಪೂರ್ವಭಾವಿಯಾಗಿಯೇ ಸೂಚನೆ ನೀಡಿರುವುದರಿಂದ ಗ್ರಾಮೀಣ ಪ್ರದೇಶದ ಜನತೆ ಈ ಮುಷ್ಕರವನ್ನೆದುರಿಸಲು ಸಾರ್ವತ್ರಿಕ ಸಜ್ಜಾಗಿದ್ದಂತೆ ಕಂಡು ಬಂದಿದೆ.
0 Comments