Ticker

6/recent/ticker-posts

ಬೈಕಿನಲ್ಲಿ ಸಾಗಿಸುತ್ತಿದ್ದ ಗಾಂಜಾ, ಮೆಥಾಫಿಟಮಿನ್,, ನಗದು ಸಹಿತ ಓರ್ವನ ಸೆರೆ


 ಕಾಸರಗೋಡು: ಬೈಕಿನಲ್ಲಿ ಸಾಗಿಸುತ್ತಿದ್ದ 6.570 ಗ್ರಾಂ ಗಾಂಜಾ, 2.525 ಗ್ರಾಂ ಮೆಥಾಫಿಟಮಿನ್, 4250 ರೂ ಎಂಬಿವುಗಳನ್ನು ವಶಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು  ಓರ್ವನನ್ನು ಬಂಧಿಸಿದ್ದಾರೆ. ಕುಂಬಳೆ ಕೊಯ್ಪಾಡಿ ನಡುಪಳ್ಳಂ ನಿವಾಸಿ ಮೂಸಾಮಿಲ್ ಬಂಧಿತ ಆರೋಪಿ. ಕೂಡ್ಲು ಕಲ್ಲಂಗೈ ಪರಿಸರದಿಂದ ಈತನನ್ನು ಬಂಧಿಸಲಾಗಿದೆ. ಕಾಸರಗೋಡು ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಸೂರಜ್ ಎನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇತರ ಅಬಕಾರಿ ಅಧಿಕಾರಿಗಳಾದ ವಿನೋದನ್.ಕೆ.ವಿ, ಉಣ್ಣಿಕೃಷ್ಣನ್ ಕೆ, ಸಾಜನ್ ಅಪ್ಯಾಲ್, ಪ್ರಶಾಂತ್ ಕುಮಾರ್ ಎ.ವಿ, ಶ್ಯಾಂಜಿತ್, ಅಮಲ್ ಜಿತ್, ಶಂಶುದ್ದೀನ್, ಅನುರಾಗ್ ಎಂ, ಮೆಯ್ ಮೋಳ್ ಜಾನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments