ಮುಂಡಿತ್ತಡ್ಕ : ಶ್ರೀ ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ವತಿಯಿಂದ ಅರಿಯಪ್ಪಾಡಿ ಮಾಡದ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಭಟ್ ಎಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಾಡಿ ಉದ್ಘಾಟಿಸಿದರು. ಶ್ರೀ ಈರ್ವರು ಉಳ್ಳಾಕ್ಲು ಪರಿವಾರ ದೈವಸ್ಥಾನದ ಅಧ್ಯಕ್ಷ ಸೀತಾರಾಮ ವಳಮೊಗರು ಅಧ್ಯಕ್ಷತೆವಹಿಸಿದ್ದರು.ಪುತ್ತಿಗೆ ಕೃಷಿ ಅಧಿಕಾರಿ ದಿನೇಶ ಪೆರುಂಬಳ, ಮುಖ್ಯ ಅತಿಥಿಗಳಾಗಿದ್ದರು.ಈರ್ವರು ಉಳ್ಳಾಕ್ಲು ಮಹಿಳಾ ಸಂಘದ ಅಧ್ಯಕ್ಷೆ ಲಲಿತ ಅರಿಯಪ್ಪಾಡಿ,ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ಅಧ್ಯಕ್ಷ ರಮೇಶ ಅರಿಯಪ್ಪಾಡಿ,ಚಿದಾನಂದ ಆಳ್ವ ಮಂಜಕೊಟ್ಟಿಗೆ, ಎಸ್.ನಾರಾಯಣ ಮೊದಲಾದವರು ಉಪಸ್ಥಿತರಿದ್ದರು. ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಸುಂದರ ಎಸ್. ಕಟ್ಟಡ ಸ್ವಾಗತಿಸಿ ಪ್ರಸಾದ್ ವಾಂತಿಚ್ಚಾಲು ವಂದಿಸಿದರು. ರಾಜೇಶ್ ರೈ ಏಳ್ಳಾನ ನಿರೂಪಿಸಿದರು.
ಬಳಿಕ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ಜರಗಿದವು. ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಿತು.
0 Comments