ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಲ್ಲಿ ಎಡರಂಗ ಹಾಗೂ ಭಾಜಪ ಪಕ್ಷ ಬಿಟ್ಟು ಕಾಂಗ್ರೆಸ್ ನೆಡೆ ಒಲವು ತೋರುವ ಕಾರ್ಯಕರ್ತರ ಸಂಖ್ಯೆ ಅಧಿಕವಾಗುತ್ತಿದೆ. ಕಾಂಗ್ರೆಸ್ ನ "ಆಪರೇಶನ್ ಹಸ್ತ" ಮುಂದುವರಿಯುತ್ತಿರುವುದು ಉಳಿದ ಪಕ್ಷಗಳಿಗೆ ಆತಂಕ ಸೃಷ್ಟಿಸುತ್ತಿದೆ.
ಎಣ್ಮಕಜೆಯಲ್ಲಿ ಪಕ್ಷಾಂತರಗೊಂಡವರನ್ನು ಮಂಡಲ ಕಾಂಗ್ರೆಸ್ ಪರವಾಗಿ ಸ್ವಾಗತಿಸಲಾಯಿತು. ಸಿಪಿಐಎಂನಿಂದ ಪಕ್ಷಾಂತರಗೊಂಡ ನಜಿಬುಲ್ಲ ಶೇಣಿ, ಸಿದ್ದಿಕ್ ಪೆರ್ದನೆ,ಬಶೀರ್ ಶೇಣಿ, ಅತ್ತಾವುಲ್ಲ, ಸುಬೈರ್, ಸಿದ್ದಿಕ್ ಹಾಗೂ ಬಿಜೆಪಿಯಿಂದ ಪಕ್ಷಾಂತರಗೊಂಡ ಉದಯ ಬಣ್ಪುತ್ತಡ್ಕ ಅವರಿಗೆ ತ್ರಿವರ್ಣ ಶಾಲು ಹೊದಿಸಿ ಸ್ವಾಗತಿಸಲಾಯಿತು. ಬಳಿಕ ಪೆರ್ಲ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಪೆರ್ಲದ ಇಂದಿರಾ ಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ಬಿ.ಎಸ್ ಗಾಂಭೀರ್ ಅಧ್ಯಕ್ಷತೆವಹಿಸಿದ್ದರು.ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್, ಮಂಡಲ ಉಸ್ತುವಾರಿ ಸಂಚಾಲಕ ಆನಂದ ಕೆ.ಮೌವ್ವಾರು,ರಾಧಾಕೃಷ್ಣ ನಾಯಕ್ ಶೇಣಿ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಲಕ್ಷ್ಮಣ ಪ್ರಭು ಕುಂಬಳೆ, ಅಬ್ದುಲ್ಲ ಕುರೆಡ್ಕ, ಪೃಥ್ವಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
0 Comments