Ticker

6/recent/ticker-posts

ಸುಳ್ಯದಿಂದ ಆಲೆಟ್ಟಿ- ಬಂದಡ್ಕ ಮಾರ್ಗವಾಗಿ ಕಾಸರಗೋಡು, ಕಾಞಂಗಾಡ್ ಗೆ ಕೆಎಸ್ಸಾರ್ಟಿಸಿ ಬಸ್ಸಿಗೆ ಆಗ್ರಹ


 ಕಾಸರಗೋಡು : ಕೇರಳ ರಾಜ್ಯಸರಕಾರಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ  ಗಡಿಪ್ರದೇಶ ಬಂದಡ್ಕದ ಮೂಲಕ ಹಾದು ಹೋಗುವ ಅಂತರಾಜ್ಯ ರಸ್ತೆಯಾದ  ಆಲೆಟ್ಟಿ- ಬಂದಡ್ಕ ಮಾರ್ಗವಾಗಿ  ಕಾಸರಗೋಡು, ಕಾಞಂಗಾಡ್ ಗೆ ಕೆಎಸ್ಸಾರ್ಟಿಸಿ‌ ಬಸ್ಸು ವ್ಯವಸ್ಥೆಯನ್ನು ಒದಗಿಸುವ ಕುರಿತು ಮನವಿ ಸಲ್ಲಿಸಲಾಗಿದೆ.ಗಡಿನಾಡು ಕನ್ನಡಿಗರ ಸಂಘ ಇದರ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ. ಗ್ರಾಮ ಗೌಡಸಮಿತಿ ಅಧ್ಯಕ್ಷ ವೆಂಕಟ್ರಮಣ ಕೊಯಿoಗಾಜೆ.  ಮಾಜಿ ಅದ್ಯಕ್ಷ ಅಚ್ಚುತ ಇಳoದಿಲ ನೇತೃತ್ವದಲ್ಲಿ        ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಯಸ್.ಗಂಗಾಧರ, ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ. ಹಿರಿಯರಾದ ಗೌಡ ಸಂಘದ, ಹಾಗೂ ಕಾಂಗ್ರೆಸ್ಸಿನ ಮುಖಂಡರಾದ ನಿತ್ಯಾನಂದ ಮುಂಡೋಡಿ,ಪಿ. ಸಿ. ಜಯರಾಮರೊಂದಿಗೆ ಮಾಜಿ ಸಚಿವ ರಾಮನಾಥ ರೈ ಮತ್ತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಇವರುಗಳ ನೇತೃತ್ವದಲ್ಲಿ  ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗ ರೆಡ್ಡಿಯವರಿಗೆ ಮನವಿಯನ್ನು ನೀಡಲಾಯಿತು.           ಮನವಿಗೆ ಸ್ಪಂದಿಸಿದ  ಸಚಿವರು  ಈ ನಾಡಿನ ಜನರ ಸೌಕರ್ಯಕ್ಕಾಗಿ  ರಸ್ತೆಸಾರಿಗೆ ವ್ಯವಸ್ಥೆ ಯನ್ನು ಕಲ್ಪಿಸುವ ಭರವಸೆ ನೀಡಿದರು.

Post a Comment

0 Comments