Ticker

6/recent/ticker-posts

ಚಿಕೂನ್ ಗುನ್ಯ ರೋಗ ಬಾಧಿಸಿ ಪೆರಿಯಾರಂ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಹತ್ತು ವರ್ಷದ ಬಾಲಕಿ‌ ಮೃತ್ಯು


 ಕಾಸರಗೋಡು: ಚಿಕೂನ್ ಗುನ್ಯ ರೋಗ ಬಾಧಿತಳಾದ 10 ವರ್ಷ ಪ್ರಾಯದ ಬಾಲಕಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ನಿವಾಸಿ ಗೌತಂ ಶರ್ಮ ಎಂಬವರ ಪುತ್ರಿ ಶಿವಾನಿ ಶರ್ಮ ಮೃತಪಟ್ಟ ಬಾಲಕಿ. ನಿನ್ನೆ (ಆದಿತ್ಯವಾರ ) ಮುಂಜಾನೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಆಕೆ ಕೊನೆಯುಸಿರೆಳೆದಳು‌.

    ಕಳೆದ ಕೆಲವು ತಿಂಗಳುಗಳಿಂದ ಶಿವಾನಿ ಲಿವರ್ ಸಂಬಂಧ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ. ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರದಂದು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಬಾಲಕಿಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು. ಪೆರಿಯಾರಂ ನಲ್ಲಿ ತಪಾಸಣೆ ಮಾದಿದಾಗ ಆಕೆಗೆ ಚಿಕೂನ್ ಗುನ್ಯಾ ರೋಗ ತಗುಲಿದೆಯೆಂದು ತಿಳಿದುಬಂತು. ಅಗತ್ಯದ ಚಿಕಿತ್ಸೆ ನೀಡಲಾಯಿತಾದರೂ ಸ್ಪಂದಿಸದೆ ಶಿವಾನಿ ಕೊನೆಯುಸಿರೆಳೆದಳು‌. ಇದೇ ವೇಳೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಶಿವಾನಿಗೆ ಅಗತ್ಯದ ಚಿಕಿತ್ಸೆ ಲಭ್ಯವಾಗಿಲ್ಲ ಎಂದು ಆಕೆಯ ಹೆತ್ತವರು ದೂರಿದ್ದಾರೆ

Post a Comment

0 Comments