ಕಾಞಂಗಾಡ್: ಮನೆಯಲ್ಲಿ ನಿದ್ರಿಸುತ್ತಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಚಿನ್ನದ ಕಿವಿಯೋಲೆಯನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿಗೆ ಅವಳಿ ಜೀವಾವಧಿ ಹಾಗೂ 2.71 ಲಕ್ಷ ರೂ ಶಿಕ್ಷೆ ನೀಡಲಾಗಿದೆ. ಕೊಡಗು ನಾಪೊಕ್ಲು ನಿವಾಸಿ ಸಲೀಂ(35) ಶಿಕ್ಷೆಗೊಳಗಾದ ವ್ಯಕ್ತಿ. ಕಳವುಗೈದ ಬಾಲಕಿಯ ಕಿವಿಯೋಲೆಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ ಈತನ ಸಹೋದರಿ ಸುನೈಬಳಿಗೆ 1 ದಿನ ಶಿಕ್ಷೆ ಹಾಗೂ 1 ಸಾವಿರ ರೂ.ದಂಡ ವಿಧಿಸಲಾಗಿದೆ.
ಕಾಞಂಗಾಡ್ ನ್ಯಾಯಾಲಯವು ಇಂದು (ಸೋಮವಾರ) ಈ ಶಿಕ್ಷೆ ವಿಧಿಸಿದೆ. 2024 ಮೇ 15 ರಂದು ಮುಂಜಾನೆ ಘಟನೆ ನಡೆದಿತ್ತು. ಬಾಲಕಿ ನಿದ್ರಿಸುತ್ತಿದ್ದ ವೇಳೆ ಆಗಮಿಸಿದ ಸಲೀಂ, ಆಕೆಯನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಿ ಕಿವಿಯೋಲೆ ಎಳೆದು ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿದ್ದನು. ಮನೆಯವರು ಹಾಗೂ ಊರವರು ಸೇರಿ ಹುಡುಕಾಡಿದಾಗ ಬಾಲಕಿ ಪತ್ತೆತಾಯಾಗಿದ್ದು ಅತ್ಯಾಚಾರ ನಡೆದ ವಿಷಯ ತಿಳಿಯಿತು. ಘಟನೆಯ ನಂತರ ಕೊಡಗಿಗೆ ಪರಾರಿಯಾದ ಸಲೀಂ ಅಲ್ಲಿಂದ ಆಂದ್ರಪ್ರದೇಶಕ್ಕೆ ಹೋಗಿದ್ದನು. ಅಲ್ಲಿಂದ ಆತನನ್ನು ಬಂಧಿಸಲಾಗಿತ್ತು
0 Comments