ಮಂಜೇಶ್ವರ: ಇಲ್ಲಿನ ಮಂಜೇಶ್ವರ ಮೇಲ್ಸೇತುವೆ ನಿರ್ಮಾಣ ಪೂರ್ತಿಗೊಂಡರೂ ಇಲ್ಲಿನ ಗೋವಿಂದ ಪೈ ಸರಕಾರಿ ಕಾಲೇಜು ಹಾಗೂ ಇಲ್ಲಿನ ಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಈ ಮೇಲ್ಸೇತುವೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಮಂಜೇಶ್ವರ ರೈಲು ನಿಲ್ದಾಣದ ಮೂಲಕ ನೂರಾರು ಮಂದಿ ಈ ಕಾಲೇಜುಗಳಿಗೆ ಕಲಿಯಲು ಬರುತ್ತಿದ್ದು ಇದೀಗ ನಿರ್ಮಾಣ ಪೂರ್ತಿಗೊಂಡ ಮೇಲ್ಸೇತುವೆಯಿಂದ ಈ ಕಾಲೇಜುಗಳಿಗೆ ತಲುಪುವ ವಿದ್ಯಾರ್ಥಿಗಳಿಗೆ, ನೌಕರರಿಗೆ ರಕ್ಷಕರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
ಮಂಜೇಶ್ವರದಲ್ಲಿ ಸರಕಾರಿ ಕಾಲೇಜುಗಳಿಗೆ ತೆರಲುವ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ನಡೆಸಲು ಮಂಜೇಶ್ವರ ಪಂಚಾಯತ್ ಆಡಳಿತ ಮಂಡಳಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ಮೇಲ್ಸೇತುವೆಯನ್ನು ಮಂಜೇಶ್ವರ ರಾಗಂ ಜಂಕ್ಷನ್ ಗೆ ಸಳಾಂತರಿಸಲಾಗಿತ್ತು.
ಮಂಜೇಶ್ವರದಲ್ಲಿ ಕೇವಲ 2 ಸರಕಾರಿ ಪದವಿ ಹಾಗೂ ಫ್ರೋ ಪಷನಲ್ ಕಾಲೇಜು ಮಾತ್ರ ಇದ್ದು ಇದೀಗ ಈ ಕಾಲೇಜಿಗೆ ತಲುಪುವ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಭಾರೀ ಸಮಸ್ಯೆ ಉಂಟಾಗಿದ್ದು ಕೂಡಲೇ ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಆರು ಪಥದ ರಸ್ತೆ ಯ ಕಾಮಾಗಾರಿ ಪೂರ್ತಿಗೊಂಡರೂ ಈ ಕಾಲೇಜಿ ತಲುಪುವ ವಿದ್ಯಾರ್ಥಿಗಳು ಇದೀಗ ರಸ್ತೆಯಲ್ಲಿದ್ದ ಕಾಲುದಾರಿಯನ್ನು ಮುಚ್ಚಿದ ಹಿನ್ನಲೆಯಲ್ಲಿ ರಸ್ತೆಗೆ ನಿರ್ಮಿಸಿದ ತಡೆಗೋಡೆಯ ಮೂಲಕ ಹತ್ತಿ ರಸ್ತೆಯ ಮೂಲಕ ರಸ್ತೆಯನ್ನು ದಾಟಿ ಬರಬೇಕಾದ ಸಂಕಷ್ಟ ಬಂದೊದಗಿದೆ. ವಿದ್ಯಾರ್ಥಿಗಳು ರೈಲು ನಿಲ್ದಾಣದಿಂದ ಇಳಿದು ಕಿ ಮಿ ನಡೆದು ಕಾಲೇಜಿಗೆ ತಲುಪಬೇಕಾದ ದುಸ್ಥಿತಿ ಬಂದೊದಗಿದ್ದು ಕೂಡಲೇ ಜನಪ್ರತಿನಿಧಿಗಳು ಸ್ವಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಮೇಲ್ಸೆತುವೆ ನಿರ್ಮಾಣದ ಸಂದರ್ಭ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಗಣಿಸಬೇಕಾಗಿತ್ತು
ಅಮೃತ ಕೆ.(ಕಾಲೇಜು ವಿದ್ಯಾರ್ಥಿ)
ಕಾಸರಗೋಡು ಜಿಲ್ಲೆಯ ಹೆಚ್ಚಿನ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಗೋವಿಂದ ಪೈ ಕಾಲೇಜನ್ನು ಆಶ್ರಯಿಸುತ್ತಿದ್ದು
ಮೇಲ್ಸೆತುವೆ ನಿರ್ಮಾಣದಲ್ಲಿ ಈ ಪ್ರದೇಶಕ್ಕೆ ಒತ್ತು ನೀಡಬೇಕಾಗಿತ್ತು ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿಯಲು ಜನಪ್ರತಿನಿಧಿಗಳು ಮುಂದಾಗಬೇಕಾಗಿತ್ತು ಎಂಬುದಾಗಿ
ಅಮೃತ ಕೆ. ತ್ವತೀಯ ಬಿಕಾಂ ವಿದ್ಯಾರ್ಥಿನಿ ಸರಕಾರಿ ಕಾಲೇಜು ಮಂಜೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
"ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ"
ಪ್ರತ್ಯುಷಾ (ಕಾಲೇಜು ವಿದ್ಯಾರ್ಥಿ)
ಮಂಜೇಶ್ವರ ಗೋವಿಂದ ಪೈ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮೇಲ್ಸೇತುವೆ ನಿರ್ಮಾಣ ಮಾಡದಿರುವುದರಿಂದ ವಿದ್ಯಾಥಿ೯ಗಳಿಗೆ ಅನ್ಯಾಯವಾಗಿದೆ ಇದು ಖಂಡನೀಯವಾಗಿದ ಎಂದು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜು ವಿದ್ಯಾರ್ಥಿನಿ
ಪ್ರತ್ಯುಷಾ ನುಡಿದಿದ್ದಾರೆ
"ಶಾಶ್ವತ ಪರಿಹಾರ ಅತ್ಯಗತ್ಯ "
ಡಾ ಮುಹಮ್ಮದ್ ಅಲಿ
ಮಂಜೇಶ್ವರ ಗೋವಿಂದ ಪೈ ಕಾಲೇಜು ಹಾಗೂ ಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೇಲ್ಸೆತುವೆ ನಿರ್ಮಾಣ ನಡೆಸಲು ಸಂಬಂಧಪಟ್ಟವರು ಮುಂದಾಗಬೇಕೆಂದೂ ಈ ಸಮಸ್ಸೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೇಕಾದ ಕ್ರಮ ಅತ್ಯಗತ್ಸವೆಂದು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜು ಪ್ರಾಚಾರ್ಯರಾದ ಡಾ ಮುಹಮ್ಮದ್ ಅಲಿ ನುಡಿದಿದ್ದಾರೆ.
0 Comments