Ticker

6/recent/ticker-posts

Ad Code

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ ಸಂಪನ್ನ


ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಲವಾರು ಸವಲತ್ತುಗಳಿವೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಸೃಜನಶೀಲತೆಯನ್ನು,ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರವೂ ಮಹತ್ತರವಾದುದು ಎಂದು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಸವಿತ. ಪಿ ಹೇಳಿದರು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ  ಉಪಜಿಲ್ಲಾ ಸಮ್ಮೇಳನವನ್ನು  ಕಾಸರಗೋಡಿನ 'ಕನ್ನಡ ಅಧ್ಯಾಪಕ ಭವನ'ದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.  ಕಾಸರಗೋಡು ಉಪಜಿಲ್ಲಾ ಅಧ್ಯಕ್ಷೆ ಯಶೋದ ಕೆ.ಎ  ಅಧ್ಯಕ್ಷತೆ ವಹಿಸಿದರು. ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ  ಕೆ. ಪುಂಡರೀಕಾಕ್ಷ ಆಚಾರ್ಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ  ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶೋಭಾರಾಣಿ ಟೀಚರ್, ಕೇಂದ್ರ  ಸಮಿತಿ ಅಧಿಕೃತ ವಕ್ತಾರ ಜಬ್ಬಾರ್  ಮುಖ್ಯ ಅತಿಥಿಗಳಾಗಿದ್ದರು. ಕೇಂದ್ರ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಶ್ರೀಲತಾ .ಕೆ, ಕೇಂದ್ರ ಸಮಿತಿ ಲೆಕ್ಕ ಪರಿಶೋಧಕ ವಿಠಲ ಅಡ್ವಳ, ಬೇಕಲ ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷೆ ರಜನಿ ಕುಮಾರಿ ಶುಭಾಶಂಸನೆಗೈದರು.  ಜಿಲ್ಲಾ ವಿದ್ಯಾಧಿಕಾರಿ ಸವಿತ . ಪಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. 2024-25 ನೇ ಶೈಕ್ಷಣಿಕ ವರ್ಷದಲ್ಲಿ ಎಲ್ ಎಸ್ ಎಸ್ ಮತ್ತು ಯು ಎಸ್ ಎಸ್ ವಿಜೇತರಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಾಗೂ  ನಾಡೋಜ ಕಯ್ಯಾರ ಕಿಞ್ಞಣ್ಣ ರೈ  ಸ್ಮರಣಾರ್ಥ ಶಾಲಾ ಮಟ್ಟದಲ್ಲಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸ್ಮರಣಿಕೆಯನ್ನು  ನೀಡಿ ಅಭಿನಂದಿಸಲಾಯಿತು.  ಕೆಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾಸರಗೋಡು ಉಪಜಿಲ್ಲಾ ಉಪಾಧ್ಯಕ್ಷೆ  ಸುರೇಖಾ.ಕೆ  ಸ್ವಾಗತಿಸಿ ಬೇಕಲ ಹೊಸದುರ್ಗ ಉಪಜಿಲ್ಲಾ ಕಾರ್ಯದರ್ಶಿ ಧನ್ಯಶ್ರೀ   ಧನ್ಯವಾದ ಸಮರ್ಪಿಸಿದರು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ  ಪ್ರದೀಪ್. ಕೆ.ವಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ  ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ  ಪೂರ್ಣಿಮಾ ಮತ್ತು ಬೇಕಲ ಹೊಸದುರ್ಗ ಕಾರ್ಯದರ್ಶಿ ಧನ್ಯಶ್ರೀ ವರದಿ ಮಂಡಿಸಿದರು. ಕೋಶಾಧಿಕಾರಿಗಳಾದ ಕುಶ .ಪಿ.ಎಎಲ್  ಮತ್ತು ಶ್ರೀವಿದ್ಯಾ ಲೆಕ್ಕಪತ್ರ ಮಂಡಿಸಿದರು. ಬಳಿಕ  ಸಂಘಟಾನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ  ವಿನೋದ್ ರಾಜ್, ಲೆಕ್ಕ ಪರಿಶೋಧಕ  ವಿಠಲ ಅಡ್ವಳ,  ಉಪಾಧ್ಯಕ್ಷೆ ಶ್ರೀಮತಿ ಶ್ರೀಲತಾ .ಕೆ,ಉಪಜಿಲ್ಲಾ ಅಧ್ಯಕ್ಷರಾದ  ಯಶೋದ ಕೆ.ಎ, ರಜನಿ  ಕುಮಾರಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಸರಗೋಡು ಉಪಜಿಲ್ಲಾ ಅಧ್ಯಕ್ಷರಾಗಿ ಕುಶ .ಪಿ.ಎಲ್ , ಉಪಾಧ್ಯಕ್ಷರಾಗಿ ರೋಹಿತಾಕ್ಷಿ  ಕೆ.ಬಿ, ಮತ್ತು ವಿಜಯ ಕುಮಾರಿ , ಕಾರ್ಯದರ್ಶಿಯಾಗಿ ಪೂರ್ಣಿಮಾ , ಜತೆ ಕಾರ್ಯದರ್ಶಿಗಳಾಗಿ ಕವಿತಾ ,  ನಿರೀಕ್ಷಾ  ಕೋಶಾಧಿಕಾರಿಯಾಗಿ ಸುರೇಖಾ .ಕೆ ಆಯ್ಕೆಯಾದರು. ಬೇಕಲ ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷರಾಗಿ  ವಿಠಲ ಅಡ್ವಳ,  ಕಾರ್ಯದರ್ಶಿಯಾಗಿ ಧನ್ಯಶ್ರೀ ,ಜತೆ ಕಾರ್ಯದರ್ಶಿಯಾಗಿ ಜೀನಾ , ಕೋಶಾಧಿಕಾರಿಯಾಗಿ ರಾಜೇಶ್  ಆಯ್ಕೆಯಾದರು.

Post a Comment

0 Comments