ಕುಂಬಳೆ : ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ ಬಣ್ಣದ ಮಹಾಲಿಂಗ ಸಂಸ್ಮರಣೆ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ ಕಾರ್ಯಕ್ರಮವು ಅನಿವಾಸಿ ಉದ್ಯಮಿ,ಕಲಾ ಪ್ರೋತ್ಸಾಹಕ ಶಿವಶಂಕರ್ ನೆಕ್ರಾಜೆ ಅವರ ಪ್ರಾಯೋಜಕತ್ವದಲ್ಲಿ ಆ.28ಕ್ಕೆ ಗುರುವಾರ ಪೂರ್ವಾಹ್ನ ಗಂಟೆ10 ರಿಂದ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಸಮೀಪ ಸೂರಂಬೈಲು ಸಾಯಿತನ್ವಿ ನಿವಾಸದ ಪರಿಸರದಲ್ಲಿ ನಡೆಯಲಿದೆ.
ಶ್ರೀ ಶಿವಶಂಕರ ನೆಕ್ರಾಜೆ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಗಳು ದೀಪ ಪ್ರಜ್ವಲನೆ ಮತ್ತು ಉದ್ಘಾಟನೆಗೈಯುವರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಅಧ್ಯಕ್ಷತೆ ವಹಿಸುವರು.ಹಿರಿಯ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಬಣ್ಣದ ಮಹಾಲಿಂಗ ಸಂಸ್ಮರಣೆ ನಡೆಸುವರು.ಈ ಸಂದರ್ಭದಲ್ಲಿ ನಡೆಯುವ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭದಲ್ಲಿ ಹಿರಿಯ ಬಣ್ಣದ ವೇಷಧಾರಿ ಸುರೇಶ್ ಕುಪ್ಪೆಪದವು ಅವರಿಗೆ ಪ್ರಶಸ್ತಿ ಪ್ರದಾನಗೈಯಲಾಗುವುದು. ಹಿರಿಯ ಬಣ್ಣದ ವೇಷಧಾರಿ ಮಾಧವ ಪಾಟಾಳಿ ನೀರ್ಚಾಲು ಅವರನ್ನು ಸನ್ಮಾನಿಸಲಾಗುತ್ತಿದೆ.ಯತೀಶ್ ಕುಮಾರ್ ರೈ ಮುಳ್ಳೇರಿಯ ಅಭಿನಂದನ ಭಾಷಣಗೈಯುವರು.ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರ ಯಜಮಾನ,ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ,ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಮುಖ್ಯ ಅತಿಥಿಗಳಾಗಿರುವರು.
ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ರಮೇಶ್ ಚೆಟ್ಟಿಯಾನ್,ಕೆ. ರಾಮ ಮುಗೋಡಿ, ಕೆ. ಸಿ. ಪಾಟಾಳಿ ಪಡುಮಲೆ,ಮಹಾಲಿಂಗ ಕೆ. ದೇರೇಬೈಲು,ತಿಮ್ಮಪ್ಪ ಪುತ್ತೂರು,ಬಣ್ಣದ ಸುಬ್ರಾಯ ಸಂಪಾಜೆ ಶುಭಾಶಂಸನೆಗೈಯುವರು. ಗಂಟೆ 12.30 ಕ್ಕೆಮಾಸ್ಟರ್ ವಿಹಾನ್ ಲೋಹಿತ್ ಹಾಡಿರುವ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಅಮ್ಮನವರ"ನಿತ್ಯಕನ್ನಿಕೆ ಶ್ರೀ ಮುಚ್ಚಿಲೋಟಮ್ಮ" ಭಕ್ತಿಗೀತೆಯ, ವಿಡಿಯೋ ಆಲ್ಬಮ್ ನ್ನು ಉದ್ಯಮಿ ಶಿವಶಂಕರ ನೆಕ್ರಾಜೆ ಬಿಡುಗಡೆಗೊಳಿಸುವರು.
ಬಳಿಕ ತೆಂಕುತಿಟ್ಟು ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಪ್ರಸಂಗದ ವಿಶೇಷ ಸನ್ನಿವೇಶಗಳಲ್ಲಿ ಇಬ್ಬರು, ಮೂವರು ಭಾಗವತರಿಂದ ಏಕಕಾಲದಲ್ಲಿ ಹಾಡುಗಾರಿಕೆ,ತೆಂಕುತಿಟ್ಟಿನ ಸುಪ್ರಸಿದ್ದ ಬಣ್ಣದ ವೇಷಧಾರಿಗಳಿಂದ ಎರಡೆರಡು ಮಹಿಷಾಸುರ, ಶುಂಭಾಸುರ, ಮತ್ತು ನಿಶುಂಭಾಸುರ,
ಪ್ರಧಾನ ಪಾತ್ರಗಳಲ್ಲಿ ತೆಂಕುತಿಟ್ಟಿನ ಸುಪ್ರಸಿದ್ದ ಕಲಾವಿದರ ಸಮ್ಮಿಲನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
0 Comments