ಕಾಸರಗೋಡು : ಬೆದ್ರಡ್ಕದ ಸಮಜ್ಞ ಕ್ಲಬ್ಬಿನ 4ನೇ ವಾರ್ಷಿಕ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸುಸಂದರ್ಭದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ‘PHd’ ಪದವಿ ಪಡೆದ ಬೆದ್ರಡ್ಕ ಮೂಲದ ಡಾ.ಸಿಂಧು ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ದೇಶಮಂಗಲ ಗೋಪಾಲಕೃಷ್ಣ ಆಚಾರ್ಯ ಮತ್ತು ಗೀತ ದಂಪತಿಗಳ ಪುತ್ರಿಯಾಗಿ 1996ರಲ್ಲಿ ಜನನ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ little Flower higher primary school ನಲ್ಲಿ ಪ್ರಾಥಮಿಕ ಶಿಕ್ಷಣ, Board high school ಹಾಗೂ vivekananda collage ನಲ್ಲಿ ಪ್ರೌಢ ಶಿಕ್ಷಣ ಪಡೆದು st philomina collage ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದರು.
ಅವರ ಸಾಧನೆಗೆ ಹಿರಿಮೆಯಾಗಿ ಭೌತಶಾಸ್ತ್ರ ವಿಭಾಗದಲ್ಲಿ ಅವರು ಮಂಡಿಸಿದ Regge Trajectories and Decay Properties of Multiquark Hadrons ಎಂಬ ಮಹಾಪ್ರಬಂಧ ಕ್ಕೆ ಮಣಿಪಾಲ ವಿಶ್ವವಿದ್ಯಾಲಯವು PHd ಪದವಿ ನೀಡಿದೆ.
ಮೂಲತಃ ದೇಶಮಂಗಲ ಗ್ರಾಮದವರಾಗಿರುವ ಅವರ ಈ ಸಾಧನೆಯನ್ನು ಗುರುತಿಸಿ ಸಮಜ್ಞ ಆರ್ಟ್ಸ್ ಸ್ಪೋರ್ಟ್ಸ್ and ಕಲ್ಚರಲ್ ಕ್ಲಬ್ಬಿನ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರಿಗೆ ಗೌರವಪೂರ್ವಕವಾಗಿ ಸನ್ಮಾನ ನಡೆದಿದೆ.
0 Comments