Ticker

6/recent/ticker-posts

Ad Code

ಮಂಗಳೂರಿನಿಂದ ಕಣ್ಣೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 2 ಕಿಲೊ ಗಾಂಜಾ , 28 ಗ್ರಾಂ ಎಂಡಿಎಂಎ ತಲಪ್ಪಾಡಿಯಲ್ಲಿ ವಶಪಡಿಸಿದ ಮಂಜೇಶ್ವರ ಪೊಲೀಸರು; ಬಂಟ್ವಾಳ, ಪುತ್ತೂರು ನಿವಾಸಿಗಳ ಸೆರೆ


 ಮಂಜೇಶ್ವರ: ಮಂಗಳೂರಿನಿಂದ ಕಣ್ಣೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 2 ಕಿಲೊ ಗಾಂಜಾ , 28 ಗ್ರಾಂ ಎಂಡಿಎಂಎ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ, ಪುತ್ತೂರು ನಿವಾಸಿಗಳಾದ 3 ಮಂದಿಯನ್ನು ಬಂಧಿಸಲಾಗಿದೆ.  ಬಂಟ್ವಾಳ ಲೋವರ್ ಬಜಾರಿನ ಮುಹಮ್ಮದ್ ಅಬ್ನಾಸ್(30), ಪುತ್ತೂರು ಕಲ್ಲಡುಕ ಬಳಿಯ ಅನ್ಸಾರ್ ಸಾಬಿತ್(26),  ಬಂಟ್ವಾಳ ಕಲ್ಲಡ್ಕದ ಮುಹಮ್ಮದ್ ಜುನೈದ್(32) ಬಂಧಿತ ಆರೋಪಿಗಳು.  ಇಂದು (ಶುಕ್ರವಾರ) ಬೆಳಗ್ಗೆ ತಲಪ್ಪಾಡಿ ಬಳಿ ಈ ಕಾರ್ಯಾಚರಣೆ ನಡೆದಿದೆ. ಮಾದಕವಸ್ತುಗಳನ್ನು  ಕಣ್ಣೂರಿಗೆ ಸಾಗಿಸಲಾಗುತ್ತಿತ್ತೆಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ

Post a Comment

0 Comments