Ticker

6/recent/ticker-posts

Ad Code

ಜುಗಾರಿ ಅಡ್ಡೆಗೆ ಪೊಲೀಸರ ದಾಳಿ, 4 ಮಂದಿಯ ಸೆರೆ, ಮೂವರು ಪರಾರಿ, 13700 ರೂ.ವಶ


 ಬದಿಯಡ್ಕ: ಬೀದಿ ದೀಪದ ಬೆಳಕಿನಲ್ಲಿ  ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಬದಿಯಡ್ಕ ಪೊಲೀಸರು ಆಟದಲ್ಲಿ ನಿರತರಾಗಿದ್ದ 4 ಮಂದಿಯನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 13700 ರೂ.ವಶಪಡಿಸಲಾಗಿದೆ. ನೆಕ್ರಾಜೆ ಪಾರಕುನ್ನು ನಿವಾಸಿ ಅಬ್ದುಲ್ಲ(49), ನೆಕ್ರಾಜೆ ಚೆಂಬೋತ್ ವಳಪ್ಪು ನಿವಾಸಿ  ಅಬ್ದುಲ್ ರಹಮಾನ್(52),  ಕುಂಜಾರು ಕೋಟಕಣಿಯ ಮುಹಮದ್ ರಫೀಖ್(49), ಚಟ್ಟಂಚಾಲು ನಿವಾಸಿ ಪಿ.ಎಂ.ಅಶ್ರಫ್ (49) ಬಂಧಿತರು. ಪೊಲೀಸ್ ದಾಳಿಯ ವೇಳೆ ಪರಾರಿಯಾದ 3 ಮಂದಿಯ ವಿರುದ್ದವೂ ಕೇಸು ದಾಖಲಿಸಲಾಗಿದೆ. ನಿನ್ನೆ (ಗುರುವಾರ) ರಾತ್ರಿ ಬದಿಯಡ್ಕ ಎಸ್.ಐ.ಅಖಿಲ್ ನೇತೃತ್ವದಲ್ಲಿ ಪೆಟ್ರೋಲಿಂಗ್ ನಡೆಸುವ ವೇಳೆ ಲಭಿಸಿದ ರಹಸ್ಯ ಮಾಹಿತಿಯಂತೆ ದಾಳಿ ನಡೆದಿದೆ. ಪೈಕ ಚೂರಿಪಳ್ಳ ಮೂಲಡ್ಕ ರಸ್ತೆಯ ಜಂಕ್ಷನ್ ನಲ್ಲಿ ಬೀದಿ ದೀಪದ ಬೆಳಕಿನಲ್ಲಿ ಜುಗಾರಿ ಅಡ್ಡೆ ಕಾರ್ಯಾಚರಿಸಿತ್ತು.

Post a Comment

0 Comments