Ticker

6/recent/ticker-posts

Ad Code

ಮಂಜೇಶ್ವರ ಠಾಣೆಯ ಪೊಲೀಸ್ ಅಧಿಕಾರಿಯ ಮೃತದೇಹ ಪೊಲೀಸ್ ಕ್ವಾಟರ್ಸಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಮಂಜೇಶ್ವರ:  ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಅ್.ಐ. ಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟ್ಟಿಕೋಲು ನಿವಾಸಿ ಮಧು(50) ಮೃತಪಟ್ಟವರು. ಇಂದು (ಶುಕ್ರವಾರ) ಬೆಳಗ್ಗೆ ಪೊಲೀಸ್ ಕ್ವಾಟರ್ಸಿನೊಳಗೆ ಮೃತದೇಹ ಕಂಡು ಬಂದಿದೆ. ಮಾಹಿತಿ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಧು ಅವರು ಅವಿವಾಹಿತರಾಗಿದ್ದಾರೆ. ಈ ಹಿಂದೆ ಬದಿಯಡ್ಕ, ಆದೂರು, ಕಾಸರಗೋಡು ನಗರ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರು ಪೊಲೀಸ್ ಠಾಣೆಗೆ ಬರುವ ಜನರ ಜತೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದ್ದರು. ಮಧು ಅವರು ಆತ್ಮಹತ್ಯೆ ಮಾಡಲು ಕಾರಣವೇನೆಂದು ತಿಳಿದು ಬಂದಿಲ್ಲ.

Post a Comment

0 Comments