Ticker

6/recent/ticker-posts

ಹೊಂಡದಲ್ಲಿ ಬಿದ್ದ ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಎರಡನೇ ತರಗತಿ ವಿದ್ಯಾರ್ಥಿನಿ ಬಸ್ಸು ಹರಿದು ಮೃತ್ಯು


 ಹೊಂಡದಲ್ಲಿ ಬಿದ್ದ ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಎರಡನೇ ತರಗತಿ ವಿದ್ಯಾರ್ಥಿನಿ ಬಸ್ಸು ಹರಿದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಾಲಕ್ಕಾಡ್ ಪಳನಿಪಾಳಯಂ ನಿವಾಸಿ ದಂಪತಿಯ ಪುತ್ರಿ ನಸ್ರಿಯತ್ ಮಿಸ್ರಿಯ (7) ಮೃತಪಟ್ಟ ಬಾಲಕಿ. ಇಂದು (ಸೋಮವಾರ) ಬೆಳಗ್ಗೆ 9 ಗಂಟೆಯ ವೇಳೆ ಈ ದುರ್ಘಟನೆ ನಡೆದಿದೆ‌

   ಬಾಲಕಿ ಆಕೆಯ ತಂದೆಯ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸ್ಕೂಟರು ರಸ್ತೆಯ ಹೊಂಡಕ್ಕೆ ಬಿದ್ದು ಮಗುಚಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಬಾಲಕಿಯ ಮೇಲೆ ಹರಿದಿದೆ. ಬಾಲಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಳು.

Post a Comment

0 Comments