Ticker

6/recent/ticker-posts

ಬೆಳ್ಳೂರು ಬಜದಲ್ಲಿ ಬಿಜೆಪಿಯ ಸಾಧನಾ ಸಮಾವೇಶ, ಕಾಂಗ್ರೆಸ್ ನೇತಾರ ಬಿಜೆಪಿಗೆ ಸೇರ್ಪಡೆ


 ಬೆಳ್ಳೂರು: ಬೆಳ್ಳೂರು ಪಂಚಾಯತು 2 ನೇ ವಾರ್ಡಿನ ಬಿಜೆಪಿಯ ಸಾಧನಾ ಸಮಾವೇಶ ಬಜ  ಕಮ್ಯೂನಿಟಿ ಹಾಲ್ ನಲ್ಲಿ ಜರಗಿತು. ಗ್ರಾಮ ಪಂಚಾಯತು ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಂದ್ರಹಾರ ರೈ ಮುಂಡಾಸು ಸ್ವಾಗತಿಸಿದರು. ಅಲ್ಪ ಸಂಖ್ಯಾತ ಮೋರ್ಚಾದ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಥೋಮಸ್ ಬಜ ಅಧ್ಯಕ್ಷತೆ ವಹಿಸಿದ್ದರು. 

ಬಿಜೆಪಿ ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ ಉದ್ಘಾಟಿಸಿದರು. 

ಪಕ್ಷದ ಮುಂದಾಳುಗಳಾದ ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಎಂ, ಇತರರಾದ ಗೋಪಾಲಕೃಷ್ಣ ಎಂ, ಪ್ರದೀಪ್ ಕುಮಾರ್ ಪುಳಿತ್ತಡಿ,  ಜಯಾನಂದ ಕುಳ, ರವೀಂದ್ರನಾಥ ಶೆಟ್ಟಿ, ರಾಮಚಂದ್ರ ಆಚಾರ್ಯ, ಸುಂದರ ರಾಜ್ ರೈ‌ ಮೊದಲಾದವರು ಉಪಸ್ಥಿತರಿದ್ದರು. ಕಳೆದ ಪಂಚಾಯತು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಣೇಶ್ ನಾಯ್ಕ ಪಟ್ರಮೂಲೆ ಅವರು ಬಿಜೆಪಿಗೆ ಸೇರ್ಪಡೆಯಾದರು

Post a Comment

0 Comments