ಕಾಸರಗೋಡು: ಬಿಲ್ ಪಾವತಿಸದ ಮನೆಯ ವಿದ್ಯುತ್ ಸಂಪರ್ಕ ಕಡಿದ ಕೋಪದಿಂದ ವ್ಯಕ್ತಿಯೋರ್ವ ಟ್ರಾನ್ಸ್ ಫಾರ್ಮರ್ ಗಳಿಂದ ಫ್ಯೂಸ್ ತೆಗೆದು ಎಸೆದ ಘಟನೆ ನಡೆದಿದೆ.ಈ ಸಂಬಂಧ ವಿದ್ಯುತ್ ಇಲಾಖೆ ನೀಡಿದ ದೂರಿನನ್ವಯ ಸೂರ್ಲು ಹೈದ್ರೋಸ್ ಮಸೀದಿ ಬಳಿಯ ಪಿ.ಕೆ.ಮುಹಮ್ಮದ್ ಮನವರ್(35) ಎಂಬಾತನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೆಲ್ಲಿಕುಂಜೆ ವಿದ್ಯುತ್ ಕಚೇರಿ ಸೆಕ್ಷನ್ ವ್ಯಾಪ್ತಿಯ 24 ಟ್ರಾನ್ಸ್ ಫಾರ್ಮರ್ ಗಳ 170 ರಷ್ಟು ಫ್ಯೂಸುಗಳನ್ನು ಈತ ತೆಗೆದು ಎಸೆದನೆಂದು ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಈತನ ಕೃತ್ಯದಿಂದ 23 ಟ್ರಾನ್ಸ್ ಫಾರ್ಮರ್ ಗಳಿಗೂ ಹಾನಿಯಾಗಿದ್ದು ಗಂಟೆಗಳ ಕಾಲ ವಿದ್ಯುತ್ ಮೊಟಕುಗೊಂಡಿತ್ತು. ಶುಕ್ರವಾರದಂದು ಈ ಘಟನೆ ನಡೆದಿತ್ತು.

0 Comments