Ticker

6/recent/ticker-posts

Ad Code

ಎಡನೀರು ಶ್ರೀಗಳಿಂದ ಪೆರಡಾಲ ಕ್ಷೇತ್ರ ಆಮಂತ್ರಣ ಮತ್ತು ಲಾಂಛನ ಬಿಡುಗಡೆ

 


ಬದಿಯಡ್ಕ: ಪೆರಡಾಲ  ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲಾಂಛನ ಬಿಡುಗಡೆ ನಡೆಯಿತು. ಪೆರಡಾಲ ಕ್ಷೇತ್ರದಲ್ಲಿ  ನಡೆದ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ತೀರ್ಥ ಶ್ರೀಪಾದಂಗಳವರು ಆಮಂತ್ರಣ, ಲಾಂಛನ ಬಿಡುಗಡೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು.

ರಕ್ಷಾಧಿಕಾರಿ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ, ಅಗಲ್ಪಾಡಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಭಟ್ ಅಗಲ್ಪಾಡಿ, ಜಯದೇವ ಖಂಡಿಗೆ, ಪೆರಡಾಲ ಕ್ಷೇತ್ರದ ಮಾಜಿ ಮೊಕ್ತೇಸರ ಪಿ. ಜಿ. ಚಂದ್ರಹಾಸ ರೈ, ಶಂಕರನಾರಾಯಣ ಮಯ್ಯ, ಶಾಮಪ್ರಸಾದ್ ಕಬೆಕ್ಕೋಡು, ಸದಾಶಿವ ಬಂಗೇರ ಮುರಿಯಂಕೂಡ್ಲು, ಡಾ. ಶ್ರೀನಿಧಿ ಸರಳಾಯ, ಕೊಡ್ಯಮೆ ಅರಮನೆಯ ಕೃಷ್ಣಯ್ಯ ಬಲ್ಲಾಳ್, ದೇವಳದ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಡಾ. ವೇಣುಗೋಪಾಲ ಕಳೆಯತೋಡಿ, ಅಶೋಕ ರೈ ಕೊರೆಕಾನ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿ ಪ್ರ. ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ ಉದಯಶಂಕರ ಪಿ. ಎಸ್ ವಂದಿಸಿದರು. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಉದನೇಶ್ವರ ಕುಣಿತ ಭಜನಾ ತಂಡದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. 2026ರ ಎ. 17 ರಿಂದ ಬ್ರಹ್ಮಕಲಶೋತ್ಸವ ನಡೆಯಲಿದ್ದು ಪೂರ್ವಭಾವಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.

Post a Comment

0 Comments