ಮಕ್ಕಾ: ಸೌದಿ ಅರೇಬಿಯಾದಲ್ಲಿ ಬಸ್ಸು-ಟ್ಯಾಂಕರು ಪರಸ್ಪರ ಡಿಕ್ಕಿ ಹೊಡೆದು 42 ಮಂದಿ ಉಂರ ಯಾತ್ರಾರ್ಥಿಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೃತಪಟ್ಟ ಎಲ್ಲರೂ ಭಾರತೀಯರಾಗಿದ್ದು ಹೈದರಾಬಾದ್ ನಿವಾಸಿಗಳಾಗಿದ್ದಾರೆ. ಇಂದು (ಸೋಮವಾರ) ಮುಂಜಾನೆ 1.30 ರ ವೇಳೆ ಈ ದುರ್ಘಟನೆ ನಡೆದಿದೆ. ಮಕ್ಕಾ ಭೇಟಿ ಮುಗಿಸಿ ಮದೀನದತ್ತ ಬಸ್ಸಿನಲ್ಲಿ ಸಾಗುವ ವೇಳೆ ಬದರ್- ಮದೀನ ಮಧ್ಯೆ ಮುಫರಹತ್ ಎಂಬ ಸ್ಥಳದಲ್ಲಿ ಅಪಘಾತ ಉಂಟಾಗಿದೆ. ಬಸ್ಸಿನಲ್ಲಿ ಒಟ್ಟು 43 ಜನರು ಪ್ರಯಾಣಿಸಿದ್ದು 42 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 20 ಮಹಿಳೆಯರೂ 11 ಮಕ್ಕಳೂ ಸೇರಿದ್ದಾರೆ.

0 Comments