ಕಾಸರಗೋಡು ; ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ಚುನಾವಣಾ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಅನೀಶ್ ಜಾರ್ಜ್ (45) ಕರ್ತವ್ಯದ ನಡುವೆ ಮನೆಯೊಳಗೆ ನೇಣು ಬಿಗಿದ ಹಿನ್ನಲೆಯಲ್ಲಿ ರಾಜ್ಯದ ಬಿಎಲ್‌ಒಗಳು ಸೋಮವಾರ (ಇಂದು) ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಕ್ರಿಯಾ ಮಂಡಳಿ ಮತ್ತು ಶಿಕ್ಷಕರ ಸೇವಾ ಸಂಘಟನೆ ಹೋರಾಟ ಸಮಿತಿ ಜಂಟಿಯಾಗಿ ಈ ಪ್ರತಿಭಟನೆಯನ್ನು ಆಯೋಜಿಸಿದೆ. ಇಂದು ಮುಖ್ಯ ಚುನಾವಣಾ ಕಚೇರಿ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

0 Comments