ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಬಳಿಯ ಮುಟ್ಟಂನಲ್ಲಿ ನಿನ್ನೆ ರಾತ್ರಿ ಉಂಟಾದ ವಾಹನ ಅಪಘಾತದಲ್ಲಿ ಮಂಜೇಶ್ವರ ಬಳಿಯ ಮಚ್ಚಂಪ್ಪಾಡಿ ನಿವಾಸಿ ಮಹಿಳೆ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಕಾಸರಗೋಡು ಭಾಗದಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದ ಎರಡು ವಾಹನಗಳು ಆದಿತ್ಯವಾರ ರಾತ್ರಿ 7.45 ರ ವೇಳೆಗೆ ಒಂದರ ಬೆನ್ನಿಗೊಂದು ಬಡಿದು ಅಫಘಾತ ಸಂಭವಿಸಿದೆ. ಈ ಪೈಕಿ ಆಲ್ಟೋ ಕಾರಿನಲ್ಲಿದ್ದ ಮಂಜೇಶ್ವರ ಬಳಿಯ ಮಚ್ಚಂಪಾಡಿ ನಿವಾಸಿ ಹುಸೈನ್ ಸಹದಿ ಎಂಬವರ ಪತ್ನಿ ಮಿರ್ಝಾನ (28) ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರ ಜತೆಗಿದ್ದ ಸಹ ಪ್ರಯಾಣಿಕರಾದ ಹುಸೈನ್ ಸಹದಿ (34), ಮರಿಯಮ್ಮತ್ ಝಕ್ಕಿಯ್ಯ (15), ಝುಮಾನ (19), ಹಾಗೂ ಅಬ್ದುಲ್ ಸಾಲಿಂ (3) ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

0 Comments