Ticker

6/recent/ticker-posts

Ad Code

ನಿದ್ದೆಯ ವೇಳೆ ಹೃದಯಾಘಾತ; ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು


 ಕಾಸರಗೋಡು: ನಿದ್ದೆಯ ವೇಳೆ ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಕಾಞಂಗಾಡ್, ಮಾಣಿಕೋತ್ ನಿವಾಸಿ ಫರ್ಸೀನ್(21) ಮೃತಪಟ್ಟ ವಿದ್ಯಾರ್ಥಿ. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದರು. ನಿನ್ನೆ (ಆದಿತ್ಯವಾರ) ಬೆಳಗ್ಗೆ  ಏಳದೇ ಇದ್ದಾಗ ಮನೆಯವರು ಎಬ್ಬಿಸಲು ಯತ್ನಿಸಿದ್ದು ಈ ವೇಳೆ ಮೃತಪಟ್ಟ ವಿಷ ತಿಳಿಯಿತು. ಕುವೈತಿನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಫೈಸಲ್- ನಸೀರ ದಂಪತಿಯ ಪುತ್ರನಾಗಿದ್ದಾರೆ. ಮಂಗಳೂರು ಆರ್ಟಿಫಿಕೇಶನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು.

Post a Comment

0 Comments