Ticker

6/recent/ticker-posts

Ad Code

ಮನೆಯಂಗಳದಲ್ಲಿನ ತೆಂಗಿನ ಮರದಿಂದ ಬಿದ್ದು ಕಾರ್ಮಿಕ ಮೃತ್ಯು


 ಕಾಸರಗೋಡು: ಮನೆಯಂಗಳದಲ್ಲಿನ ತೆಂಗಿನ ಮರದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಬಂ ಪಳ್ಳತ್ತುವಯಲ್ ನಿವಾಸಿ ಪಿ.ವಿ.ಕೊಟ್ಟನ್(65) ಮೃತಪಟ್ಟವರು. ನಿನ್ನೆ (ಆದಿತ್ಯವಾರ) ಮನೆಯಂಗಳದಲ್ಲಿರುವ ತೆಂಗಿನ ಮರದಿಂದ  ತೆಂಗಿನ ಕಾಯಿ ಕೊಯ್ಯುವ ವೇಳೆ ಜಾರಿ ಬಿದ್ದರೆನ್ನಲಾಗಿದೆ.ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ಪತ್ನಿ ಕಾರ್ತಿಯಾಯಿನಿ, ಮಕ್ಕಳಾದ ನಿತಿನ್, ನಿಖಿಲ, ನಿತ್ಯ, ಅಳಿಯಂದಿರಾದ ಸಂತೋಷ್, ಪ್ರಶಾಂತ್ ಎಂಬಿವರನ್ನು ಅಗಲಿದ್ದಾರೆ. ಪೊಲೀಸರು ಕೇಸು ದಾಖಲಿಸಿದರು.

Post a Comment

0 Comments