ಕಾಸರಗೋಡು: 64ನೇ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದ ವೇದಿಕೆಯೇತರ ಸ್ಪರ್ಧೆಗಳು ಇಂದು ಮೊಗ್ರಾಲ್ ಜಿ.ವಿ.ಎಚ್.ಎಸ್.ಎಸ್ ನಲ್ಲಿ ಪ್ರಾರಂಭಗೊಂಡಿವೆ. ಮೊದಲ ದಿನ ಯು.ಪಿ., ಎಚ್.ಎಸ್., ಮತ್ತು ಎಚ್.ಎಸ್.ಎಸ್ ವಿಭಾಗಗಳಲ್ಲಿ 45 ಸ್ಪರ್ಧೆಗಳು ನಡೆಯುತ್ತಿದೆ. ನಾಳೆ (ಡಿ.3) 35 ಸ್ಪರ್ಧೆಗಳು ನಡೆಯಲಿವೆ. ಎರಡು ದಿನಗಳಲ್ಲಿ ಸುಮಾರು ಐದುನೂರು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ತಿಂಗಳ 29 ರಿಂದ 31 ರವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿವೆ. ಎರಡನೇ ತ್ರೈಮಾಸಿಕ ಪರೀಕ್ಷೆಗಳು ಮತ್ತು ಕ್ರಿಸ್‌ಮಸ್ ರಜೆಯನ್ನು ಪರಿಗಣಿಸಿ, ಕ್ರಿಸ್‌ಮಸ್ ರಜೆಯ ಸಮಯದಲ್ಲಿಯೇ ಕಲೋತ್ಸವದ ವೇದಿಕೆ ವಿಭಾಗದ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಜನವರಿ ಎರಡನೇ ವಾರದಲ್ಲಿ ರಾಜ್ಯ ಮಟ್ಟದ ಕಲೋತ್ಸವ ನಡೆಯುವುದರಿಂದ, ಜನವರಿ 5 ರ ಮೊದಲು ಜಿಲ್ಲಾ ಮಟ್ಟದ ಕಲೋತ್ಸವವನ್ನು ಪೂರ್ಣಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿದ ನಂತರ, ಕ್ರಿಸ್‌ಮಸ್ ರಜಾದಿನಗಳಲ್ಲಿ ಕಂದಾಯ ಜಿಲ್ಲಾ ಕಲೋಲೋತ್ಸವವನ್ನು ನಡೆಸಲು ನಿರ್ಧರಿಸಲಾಯಿತು.

0 Comments