Ticker

6/recent/ticker-posts

Ad Code

ಮಧೂರು ಕ್ಷೇತ್ರಾಂಗಣದಲ್ಲಿ ಮಂಜೇಶ್ವರ ಭಾರತಾಂಬಾ ಭಜನಾ ಸಂಘದ ಪ್ರಥಮ ವಾರ್ಷಿಕೋತ್ಸವ ಸಂಭ್ರಮ

 


ಕಾಸರಗೋಡು : ದೇಶಭಕ್ತಿ, ದೇವಭಕ್ತಿ ಮತ್ತು ಸನಾತನ ಧರ್ಮದ ಅಭ್ಯುದಯಕ್ಕೆ ಸದಾ ಅರ್ಪಿತವಾಗಿರುವ ಮಂಜೇಶ್ವರದ ಭಾರತಾಂಬಾ ಭಜನಾ ಸಂಘವು ಪ್ರಥಮ ವಾರ್ಷಿಕೋತ್ಸವವನ್ನು   ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಸಿತು. ಒಂದು ವರ್ಷದ ಹಿಂದೆ ಇದೇ ದೇವಾಲಯದಲ್ಲಿ ಮೊದಲ ಸೇವೆ ಸಲ್ಲಿಸುವ ಮೂಲಕ ಪ್ರಾರಂಭಗೊಂಡ ಈ ಭಜನಾ ಸಂಘ, ಕಳೆದ ಒಂದು ವರ್ಷದ ಅವಧಿಯಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ಅನೇಕ ಭಜನಾ ಸೇವೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿತ್ತು. ಕಾರ್ಯಕ್ರಮದಲ್ಲಿ ತಂಡವು ಎರಡು ಗಂಟೆಗಳ ನಿರಂತರ ಭಜನಾ ಸೇವೆ ಸಲ್ಲಿಸಿ ಭಕ್ತರನ್ನು ಭಗವದ್ಭಕ್ತಿಯಲ್ಲಿ ಒಂದಾಗುವಂತೆ ಮಾಡಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನ ವ್ಯವಸ್ಥಾಪಕರಾದ ಜಯದೇವ ಖಂಡಿಗೆ ಅವರು ಭಜನಾ ತಂಡದ ಸದಸ್ಯರಿಗೆ ಶಾಲು ಹೊದಿಸಿ ಗೌರವಿಸಿದರು. ದೇವಸ್ಥಾನದ ಅರ್ಚಕರು  ಪ್ರಾರ್ಥಿಸಿ  ಪ್ರಸಾದ ನೀಡಿದರು. ಭಾರತಾಂಬಾ ಭಜನಾ ತಂಡದ  ನೇತಾರ, ಸಮಾಜ ಸೇವಕ ಮತ್ತು ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಕಾರ್ಯಕ್ರಮದ ವೇಳೆ ದೇವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಗೌರವ ಸಲ್ಲಿಸಿದರು. ಸಂಘದ ಸಂಯೋಜಿತ ಸೇವಾ ಮನೋಭಾವ, ಶಿಸ್ತಿನ ಭಜನಾ ಪರಂಪರೆ ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಭಕ್ತರು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

Post a Comment

0 Comments