ಮಹಾರಾಷ್ಟ್ರ: ಎನ್ ಸಿಪಿ ಪಕ್ಷದ ನೇತಾರ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಗಿಂತ ಕೆಲ ಕ್ಷಣಗಳ ಮುಂಚೆ ಪತನಗೊಂಡ ದುರಂತ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ 8.40ಕ್ಕೆ ಸಂಭವಿಸಿದೆ. ಅಜಿತ್ ಪವಾರ್ ಸಹಿತ ವಿಮಾನದೊಳಗಿದ್ದ ಅವರ ಭದ್ರತಾ ಸಿಬ್ಬಂದಿ ಮತ್ತು ಪಿ.ಎ,ಇಬ್ಬರು ಪೈಲಟ್ ಗಳ ಸಹಿತ ವಿಮಾನದಲ್ಲಿದ್ದ 7 ಜನರೂ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ವರದಿಯಾಗಿದೆ. ದುರಂತದಲ್ಲಿ ವಿಮಾನ ಸುಟ್ಟು ಕರಕಲಾಗಿದೆ. ವಿಮಾನದಲ್ಲಿದ್ದವರನ್ನು ತಕ್ಷಣ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಅಜಿತ್ ಪವಾರ್ ಅವರು ಮುಂಬೈನಿಂದ ಬೆಳಿಗ್ಗೆ ಬಾರಾಮತಿಗೆ ಹೊರಟಿದ್ದರು. ಸಾಮಾನ್ಯವಾಗಿ ಮುಂಬೈನಿಂದ ಬಾರಾಮತಿಗೆ ಪ್ರಯಾಣ ಮಾಡುವಾಗ ಅವರು ಸಣ್ಣ ವಿಮಾನ ಬಳಸುತ್ತಾರೆ. ಅದೇ ರೀತಿ, ಇಂದು ಅಜಿತ್ ಪವಾರ್ ಎಂದಿನಂತೆ ಬಾರಾಮತಿಗೆ ಬರುತ್ತಿದ್ದರು. ಅವರ ವಿಮಾನ ಬಾರಾಮತಿ ತಲುಪುತ್ತಿದ್ದಾಗ, ವಿಮಾನವು ಲ್ಯಾಂಡಿಂಗ್ ವೇಳೆ ಹೊಲಕ್ಕೆ ಪತನಗೊಂಡು ಭೀಕರ ಅಪಘಾತ ಸಂಭವಿಸಿದೆ. ಇವತ್ತು 4 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ನಡುವೆ ವಿಧಿ ಅವರನ್ನು ಕಸಿದುಕೊಂಡಿದೆ.

0 Comments