Ticker

6/recent/ticker-posts

Ad Code

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಪೆರುಂಬಳ ಶಾಲೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

 

ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​​(ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ  ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ  ಪೆರುಂಬಳ ಜಿ.ಎಲ್.ಪಿ ಶಾಲೆಯಲ್ಲಿ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸುಮಾರು 60 ಮಕ್ಕಳು ಭಾಗವಹಿಸಿದ ಸ್ಪರ್ಧೆಯಲ್ಲಿ ಸಬ್ ಜ್ಯುನಿಯರ್ ವಿಭಾಗದಲ್ಲಿ  ಕಿರಣ್ ಮಹೇಶ್  ಪ್ರಥಮ ಸ್ಥಾನ,  ಸಿಹಾನ್ ಹಾಗೂ ಆದೀಕ್ಷ ಇಬ್ಬರು ದ್ವಿತೀಯ ಬಹುಮಾನ ಪಡೆದರು. ಜ್ಯೂನಿಯರ್ ವಿಭಾಗದಲ್ಲಿ ಸಾದ್ವಿಕ್ ಪ್ರಥಮ ಸ್ಥಾನ, ಶಿವಪ್ರಿಯ ದ್ವಿತೀಯ ಸ್ಥಾನ ಹಾಗೂ ಅಕ್ಷಯಶ್ರೀ ಪ್ರೋತ್ಸಾಹಕ ಬಹುಮಾನ  ಪಡೆದರು.

ಘಟಕದ ಅಧ್ಯಕ್ಷ ವಸಂತ ಕೆರಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ  ವಿನಿತಾ ಟೀಚರ್, ಪಿ.ಟಿ.ಎ. ಅಧ್ಯಕ್ಷರಾದ ಮುಹಮ್ಮದ್ ರಿಯಾಸ್, ಸ್ಪರ್ಧೆಯ ತೀರ್ಪುಗಾರರಾದ ಕಾಸರಗೋಡಿನ ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್, ಎಕೆಪಿಎ ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಮನು ಎಲ್ಲೋರ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ ವಿಜೇತರಾದ ಮಕ್ಕಳಿಗೆ ಬಹುಮಾನ ಸ್ಮರಣಿಕೆ ಮತ್ತು ಸರ್ಟಿಫಿಕೇಟ್ ವಿತರಿಸಿದರು. ಘಟಕ ಸಮಿತಿ ಉಪಾಧ್ಯಕ್ಷ ಅಭಿಷೇಕ್ ಸಿ, ಸಮಿತಿ ಸದಸ್ಯ ರತೀಶ್ ರಾಮು ಉಪಸ್ಥಿತರಿದ್ದರು. ಕಾರ್ಯದರ್ಶಿ  ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ಶಾಲಾ  ಅಧ್ಯಾಪಕಿ ದೇವ್ ಟೀಚರ್ ಧನ್ಯವಾದವಿತ್ತರು

Post a Comment

0 Comments