Ticker

6/recent/ticker-posts

Ad Code

ಜ.28, 29ರಂದು ಪರ್ತಿಕ್ಕಾರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ 34ನೇ ವಾರ್ಷಿಕೋತ್ಸವ

 

ಉಕ್ಕಿನಡ್ಕ : ಪರ್ತಿಕ್ಕಾರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ 34ನೇ ವಾರ್ಷಿಕೋತ್ಸವ ಜ.28, 29ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕ್ಷೇತ್ರದ ತಂತ್ರಿವರ್ಯರಾದ ಕಲ್ಕುಳ ಬೂಡು ಶ್ರೀ ಶಂಕರನಾರಾಯಣ ಕಡಮಣ್ಣಾಯ ಅವರ ತಾಂತ್ರಿಕತ್ವದಲ್ಲಿ ಕಾರ್ಯಕ್ರಮ‌ ಜರಗಲಿದೆ. ಜ. 28ಕ್ಕೆ ಬೆಳಗ್ಗೆ ಗಂಟೆ 8 ಗಂಟೆಗೆ ತಂತ್ರಿವರ್ಯರ ಆಗಮನ, 8.30ಕ್ಕೆ ಶುದ್ದಿ ಕಲಶ, ಗಣಪತಿ ಹೋಮ, ಶ್ರೀ ವೆಂಕಟ್ರಮಣ ಸ್ವಾಮಿಯ ಪಾನಕ ಪೂಜೆ, ಬೆಳಗ್ಗೆ ಗಂಟೆ 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ. ಸಂಜೆ 3ಗಂಟೆಯಿಂದ ಶ್ರೀ ಚಾಮುಂಡೇಶ್ವರೀ ಭಜನಾ ಸಂಘ, ಪರ್ತಿಕ್ಕಾರು ಇವರಿಂದ ಭಜನೆ ಹಾಗೂ ಕುಣಿತ ಭಜನೆ, 6 ಗಂಟೆಗೆ ಸಂಧ್ಯಾ ದೀಪಾರಾಧನೆ, ರಾತ್ರಿ 7.00ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ 8.00ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಪ್ರಸಾದ ಭೋಜನ, ರಾತ್ರಿ 9.00ಕ್ಕೆ ಶ್ರೀ ದೈವಗಳ ತೊಡಂಲ್, 10 ಗಂಟೆಗೆ ಕೊರತ್ತಿ, ಪಂಜುರ್ಲಿ, ಕಲ್ಲುರ್ಟಿ ದೈವಗಳಿಗೆ ಹರಕೆ ಸೇವೆ, ಪ್ರಸಾದ ವಿತರಣೆ ಜರಗಲಿದೆ. ಜ29 ಗುರುವಾರ ಬೆಳಗ್ಗೆ 10ರಿಂದ ಶ್ರೀ ಪಡಿಞಾರ್ ಚಾಮುಂಡಿ ದೈವದ ಹರಕೆ ಸೇವೆ, ಪ್ರಸಾದ ವಿತರಣೆ, ಅಪರಾಹ್ನ 3ರಿಂದ ಗುಳಿಗ ದೈವದ ಹರಕೆ ಸೇವೆ, ಪ್ರಸಾದ ವಿತರಣೆ, ಸಾಯಂ. 5ಕ್ಕೆ ಶ್ರೀ ಪಡಿಞಾರ್ ಚಾಮುಂಡಿ, ಪಂಜುರ್ಲಿ, ಗುಳಿಗ ದೈವಕ್ಕೆ ತಂಬಿಲ ಸೇವೆ, 6 ಗಂಟೆಗೆ ಸಂಧ್ಯಾ ದೀಪಾರಾಧನೆ, ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.

Post a Comment

0 Comments