ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಏಪ್ರಿಲ್ 26 ರಿಂದ ಮೇ 2 ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದ್ದು, ಮಹಿಳಾ ಸಮಾವೇಶದ ಕಾರ್ಯಕ್ರಮಕ್ಕಾಗಿ ಅದೃಷ್ಟ ಚೀಟಿಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಎನ್ ವೆಂಕಟರಮಣ ಹೊಳ್ಳರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಮಾತೃ ಸಮಿತಿ ಅಧ್ಯಕ್ಷೆ ಶೋಭನ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿಯ ಮಾತೃ ಸಮಿತಿ ಕಾರ್ಯದರ್ಶಿ ದೀಪಾ ರಾಜೇಶ್ ಮತ್ತು ವಿವಿಧ ಪದಾಧಿಕಾರಿಗಳು ಭಾಗವಹಿಸಿದರು.

0 Comments