ಮಂಗಳೂರು : ಕರ್ನಾಟ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಗುರುವಪ್ಪ ಕೆ.ಅವರಿಗೆ 2026ರ ಕರ್ನಾಟಕ ಸರಕಾರದ ಅತ್ಯುತ್ತಮ ಸುರಕ್ಷ ಚಾಲಕ ಬೆಳ್ಳಿಪದಕ ಗಣರಾಜ್ಯೋತ್ಸವ ದಿನಾಚರಣೆಯಂಗವಾಗಿ ಮಂಗಳೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರದಾನಿಸಲಾಯಿತು.
ಮೂಲತಃ ನೀರ್ಚಾಲು ಸಮೀಪದ ಕನ್ನೆಪ್ಪಾಡಿ ನಿವಾಸಿಯಾದ ಗುರುವಪ್ಪ ದಿ.ಚನಿಯ -ಮದರು ದಂಪತಿಗಳ ಪುತ್ರರಾದ ಗುರುವಪ್ಪರು 1997ರಲ್ಲಿ ದ.ಕ.ಜಿಲ್ಲೆಯ ಧರ್ಮಸ್ಥಳ ಡಿಪ್ಪೊದಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದು ಬಳಿಕ ಹುಬ್ಬಳ್ಳಿ -ಧಾರವಾಡ ಸಂಚಾರ ನಡೆಸಿದ್ದರು. 15 ವರ್ಷಗಳ ಕಾಲ ಧರ್ಮಸ್ಥಳ- ಬೆಂಗಳೂರು ಮಾರ್ಗವಾಗಿ ಸಂಚರಿಸಿದ್ದು ಬಳಿಕ ಇದೀಗ ಪುತ್ತೂರು ಬೆಂಗಳೂರು ರಾಜಹಂಸದಲ್ಲಿ ಚಾಲಕರಾಗಿ ಸಂಚರಿಸಿದ್ದರು. ಇದೀಗ ಸೀನಿಯರ್ ಚಾಲಕ ಹುದ್ದೆಯಲ್ಲಿ ಮುಂದುವರಿಯುತ್ತಿದ್ದು ಎಲ್ಲರೊಂದಿಗೂ ನಗುಮೊಗದೊಂದಿಗೆ ಬೆರೆಯುವ ವ್ಯಕ್ತಿತ್ವದ ಇವರು ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆಸಿದ ಸುರಕ್ಷಾ ಚಾಲನೆಯನ್ನು ಪರಿಗಣಿಸಿ ಬೆಳ್ಳಿಪದಕ ಸಹಿತ ಅತ್ಯುತ್ತಮ ಸುರಕ್ಷಾ ಚಾಲಕ ಪ್ರಶಸ್ತಿ ಪ್ರದಾನಿಸಲಾಗಿದೆ. ಪತ್ನಿ ರಾಧಾ ಮಕ್ಕಳಾದ ತ್ವರಿತ, ಬಬಿತ್ ರಾಜ್ ಅವರೊಂದಿಗೆ ಸಂಸಾರ ಸಾಗಿಸುತ್ತಿದ್ದಾರೆ.


0 Comments