ಮಾಣಿಲ : ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಪೂಜ್ಯ ಧರ್ಮದರ್ಶಿ ಶ್ರೀ ಶ್ರೀ ಶ್ರೀ ಕೃಷ್ಣ ಗುರೂಜಿ ಇವರ ಮಾರ್ಗದರ್ಶನದಲ್ಲಿ ದಯಾ ಕ್ರಿಯೇಷನ್ ಬಾಯಾರು ಹಾಗೂ ದಯಾ ಮೆಲೋಡಿಸ್ ಮ್ಯೂಸಿಕಲ್ ಇದರ ಪಂಚಮ ವರ್ಷದ ಸಂಭ್ರಮಾಚರಣೆಯು ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ 'ದೇವರ ಸೇವೆ ಮಾಡಲು ನಾನಾ ರೀತಿಯ ಮಾರ್ಗಗಳಿವೆ. ಇದರಲ್ಲಿ ಕಲಾಮಾತೆಯ ಸೇವೆಯೂ ಒಂದು ದೊಡ್ಡ ಸೇವೆ. ತಮ್ಮ ತಂಡಕ್ಕೆ ಕಲಾಮಾತೆಯ ಅನುಗ್ರಹ ಸದಾ ಇರಲಿ' ಎಂದು ಹರಸಿದರು.
ಸಭೆಯಲ್ಲಿ ಕ್ಷೇತ್ರದ ಮೊಕ್ತೇಸರ, ಸಾಹಿತಿ ಎಂ ಕೆ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ನಿವೃತ್ತ ಅಧ್ಯಾಪಕ ಶೇಖರ ಶೆಟ್ಟಿ ಬಾಯಾರು, ವಿಶೇಷ ಚಾನಲ್ ನ ಪ್ರಧಾನ ಸಂಪಾದಕ ಜಯ ಮಣಿಯಂಪಾರೆ, ಕುಕ್ಕಾಜೆ ಕ್ಷೇತ್ರದ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪ ಕಾಮಜಾಲು, ದುರ್ಗಾಪರಮೇಶ್ವರಿ ಭಜನಾ ಮಂದಿರ ತಾರಿದಳ ಅಧ್ಯಕ್ಷ ಸಂಜೀವ ಕುಲಾಲ್ ಪಳನೀರು, ದಯಾ ಕ್ರಿಯೇಷನ್ ನ ಸ್ಥಾಪಕ ದಯಾನಂದ ಅಮೀನ್ ಬಾಯಾರು ಮತ್ತಿತರರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಕೊರಗಪ್ಪ ಪೂಜಾರಿ ಬಾಳೆಕಲ್ಲು, ಪ್ರಶಸ್ಯಿ ವಿಜೇತ ಛಾಯಾಗ್ರಹಕ ಸುದರ್ಶನ ತಾರಿದಳ, ಗಾಯಕಿ ಶ್ವೇತ ಪ್ರವೀಣ್ ಆಚಾರ್ಯ ಮೂಡುಬಿದಿರೆ, ಗಾಯಕ ದಿನೇಶ್ ಮಿತ್ತನಡ್ಕ, ಗಾಯಕಿ ಕುಶಿ ವಿಟ್ಲ ಇವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯೆಯರು ಸುಶ್ಮಿತ, ಶ್ರೀಜಾ ಕುಕ್ಕಾಜೆ, ಸುಪ್ರಿತ ಕುಕ್ಕಾಜೆ, ಸನ್ಮಾನ ಪತ್ರ ವಾಚಿಸಿದರು. ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ, ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು. ರವಿ ಎಸ್ ಎಂ ಕುಕ್ಕಾಜೆ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಪಂದನ ಕಲಾವಿದರು ಬಂಟ್ವಾಳ ಇವರಿಂದ 'ಸಾದಿ ತಿಕ್ಕುಜಿ' ಎಂಬ ನಾಟಕ ಪ್ರದರ್ಶನಗೊಂಡಿತು.

0 Comments