ಕುಂಬಳೆ : ಮಿತ್ತಕಳತ್ತೂರು ಶ್ರೀ ಧೂಮಾವತೀ ಭದ್ರಕಾಳಿ ದೈವಸ್ಥಾನದಲ್ಲಿಎರಡು ವರ್ಷಕ್ಕೊಮ್ಮೆ ನಡೆದು ಬರುವ ಶ್ರೀ ಧೂಮಾವತೀ ದೈವದ ಧರ್ಮನೇಮೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಜ. 31 ಶನಿವಾರ ವೇದಮೂರ್ತಿ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳವರ ಮಾರ್ಗದರ್ಶನದಲ್ಲಿ ಪುರೋಹಿತರಾದ ಶ್ರೀ ಪ್ರವೀಣ ಭಟ್ ಕಾರಿಂಜೆ ಹಳೆಮನೆ ಇವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಇದರ ಅಂಗವಾಗಿ ಬೆಳಗ್ಗೆ ಗಂಟೆ 8ರಿಂದ ಗಣಪತಿ ಹವನ, ಪೂರ್ಣಾಹುತಿ, ಮಂಗಳಾರತಿ, ಗಂಟೆ 9-30ರಿಂದ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, 11-30ಕ್ಕೆ ಮಹಾಮಂಗಳಾರತಿ, 11-45ಕ್ಕೆ ಶ್ರೀ ದೈವಗಳಿಗೆ ಹಾಗೂ ಭದ್ರಕಾಳಿ ಅಮ್ಮನವರಿಗೆ ತಂಬಿಲ ಸೇವೆ, ಭಂಡಾರ ಏರುವುದು, ಪ್ರಸಾದ ವಿತರಣೆ. ಮಧ್ಯಾಹ್ನ 1-00ಗಂಟೆಗೆ ಅನ್ನಪ್ರಸಾದ ವಿತರಣೆ, ಗಂಟೆ 3ಕ್ಕೆ ಮೋಂದಿಕೋಲ, ಸಂಜೆ 6ರಿಂದ ಶ್ರೀ ಧೂಮಾವತಿ ದೈವದ ಧರ್ಮನೇಮ, ರಾತ್ರಿ 8ಗಂಟೆಗೆ ಶ್ರೀ ದೈವದ ಅರಸಿನಹುಡಿ ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ ಗಂಟೆ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಧುರ ಬಾಲಗೋಕುಲ ಇದರ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಮತ್ತು 'ತುಡರ್ ಕಲಾವಿದೆರ್ ಕಳತ್ತೂರು' ಇದರ ಸದಸ್ಯರಿಂದ ವಿಶುಕುಮಾರ್ ರಚಿಸಿದ ಕೃಷ್ಣ ಕಳತ್ತೂರು ನಿರ್ದೇಶನದ ತುಳು ಚಾರಿತ್ರಿಕ ನಾಟಕ 'ಕೋಟಿಚೆನ್ನಯೆ' ಪ್ರದರ್ಶನಗೊಳ್ಳಲಿದೆ.

0 Comments