Ticker

6/recent/ticker-posts

Ad Code

ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೋಫೆಸರ್ ಸುಬ್ಬ ಪಕ್ಕಳ ನಿಧನ

 

ತಲಪಾಡಿ :  ಖ್ಯಾತ ಕವಿ, ಸಂಖ್ಯಾಶಾಸ್ತ್ರಜ್ಞ ನಿವೃತ್ತ ಪ್ರಾಂಶುಪಾಲ ಪ್ರೊ. ಸುಬ್ಬ ಪಕ್ಕಳ  ಪಂಜಾಳ (80) ನಿಧನರಾದರು. ತಲಪಾಡಿಯ  ಕಾರಂತರ ಪಾಲು ಮನೆಯವರೆಂದು ಪ್ರಸಿದ್ಧರಾದ ಇವರು  ಇಂದು ಮುಂಜಾನೆ ತಮ್ಮ ಬೆಂಗಳೂರು ನಿವಾಸದಲ್ಲಿ ಹೃದಯ ಸಂಬಂದಿ ಕಾಯಿಲೆಯಿಂದ ನಿಧನ ಹೊಂದಿರುವರು. ಮೃತರ ಅಂತಿಮ ಯಾತ್ರೆಯು ಅವರ ಕೊಣಾಜೆ ಪರಿಸರದ ಪಿ. ಎ. ಕಾಲೇಜು ಸಮೀಪದ ಅವರ ವೃಂದಾವನ ಮನೆಯಲ್ಲಿ ಇಂದು ಸಂಜೆ ಸುಮಾರು5.30 ಕ್ಕೆ  ನೆರವೇರಲಿರುವುದು. 

 ತಮ್ಮ ಕಾಲೇಜು ಜೀವನದ ಅವಧಿಯಲ್ಲೇ ರಾಂಕ್ ವಿದ್ಯಾರ್ಥಿ ಆಗಿದ್ದ ಮೃತರು ತಲಪಾಡಿ ದೇವಿಪುರ ಪರಿಸರದಲ್ಲಿ ವಯಸ್ಕರ ಶಿಕ್ಷಣ ತೆರೆದು ಅನೇಕರಿಗೆ ವಿದ್ಯಾದಾನ  ಮಾಡುತಿದ್ದರು. 1976 ರಿಂದ 1981ರವರೆಗೆ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ(ಈಗಿನ ವಿ. ವಿ ಕಾಲೇಜು)  ಉಪಾನ್ಯಾಸಕರಾಗಿ ನಂತರ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಮತ್ತು ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ಸೇವೆಸಲ್ಲಿಸಿ ನಂತರದ ದಿನಗಳಲ್ಲಿ ಹೆಬ್ರಿಯ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ, ಕೊನೆಗೆ ಬೆಂಗಳೂರಿನ ಪದವಿಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತಿ ಹೊಂದಿದ್ದರು. ಲೇಖಕರೂ ಕವಿಗಳು ಅದ ಇವರು ತಮ್ಮ ನಿವೃತ್ತಿ ನಂತರ ಕೂಡ ಹಲವು ಶಾಲಾ ಕಾಲೇಜು ಸಂಘ ಸಂಸ್ಥೆಗಳಿಗೆ ತೆರಲಿ ಸಂಖ್ಯಾ ಶಾಸ್ತ್ರದ ಬಗ್ಗೆ ಉಚಿತ ಶಿಕ್ಷಣ ನೀಡುತಿದ್ದರು. 

    ಮೃತರು  ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಅನೇಕ ಬಂಧು ಮಿತ್ರರು,  ಹಾಗೂ ವಿದ್ಯಾರ್ಥಿ ಸಮೂಹವನ್ನು ಅಗಲಿರುವರು. ತನ್ನ ಜೀವಿತ ಅವಧಿಯಲ್ಲೇ   ಮರಣಾ ನಂತರ ಶರೀರವನ್ನು ದಾನ ಮಾಡುವುದಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರಾರು ಬರೆದಿದ್ದರು. ಅದರಂತೆ ಕುಟುಂಬದ ಸದಸ್ಯರು ಸದಸ್ಯರು ಸಹಕರಿಸುವುದಾಗಿ ತಿಳಿಸಿರುವರು.

Post a Comment

0 Comments