ಕಾಸರಗೋಡು: ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 146.88 ಲೀಟರ್ ಕರ್ನಾಟಕ ಮದ್ಯದೊಂದಿಗೆ ಯುವಕನನ್ನು ಕುಂಬಳೆಯಿಂದ ಬಂಧಿಸಲಾಗಿದೆ. ಮಂಜೇಶ್ವರದ ಕುಂಜತ್ತೂರಿನ ನಿಶಾಂತ್ ನಿವಾಸದ ಬಿ. ಪ್ರಶಾಂತ್ ಅವರನ್ನು ಕಾಸರಗೋಡು ಅಬಕಾರಿ ಮತ್ತು ಮಾದಕ ದ್ರವ್ಯ ವಿರೋಧಿ ವಿಶೇಷ ದಳದ ಅಧಿಕಾರಿ ಕೆ.ವಿ. ರಂಜಿತ್ ಮತ್ತು ಅವರ ತಂಡವು ಬಂಧಿಸಿದೆ. ಆರೋಪಿಯನ್ನು ವಶಪಡಿಸಿದ ವಸ್ತು ಸಹಿತ ಕುಂಬಳೆ ಅಬಕಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ.
ಅಬಕಾರಿ ತಂಡದಲ್ಲಿ ಸಿವಿಲ್ ಅಬಕಾರಿ ಅಧಿಕಾರಿಗಳಾದ ಶೈಲೇಶ್ ಕುಮಾರ್, ಸುಧೀರ್, ಮಂಜುನಾಥ, ಮೋಹನಕುಮಾರ್, ಟಿ.ಪಿ.ಅತುಲ್, ಅಬಕಾರಿ ಗುಪ್ತಚರ ದಳದ ಪ್ರಿವೆಂಟಿವ್ ಆಫೀಸರ್ ಸಜನ್ ಮೊದಲಾದವರಿದ್ದರು.

0 Comments