Ticker

6/recent/ticker-posts

Ad Code

ಖ್ಯಾತ ಯಕ್ಷಗಾನ ಕಲಾವಿದ, ಸಂಘಟಕ ಚನಿಯಪ್ಪ ನಾಯ್ಕ್ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ


 ಕಾಸರಗೋಡು: ಖ್ಯಾತ ಯಕ್ಷಗಾನ ಕಲಾವಿದ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ, ಸಂಘಟಕ ಎನ್.ಚನಿಯಪ್ಪ ನಾಯ್ಕ್ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕ ಬೆಂಗಳೂರು ನೀಡುವ 2026ನೇ ಸಾಲಿನ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಘೋಷಿಸಿದ್ದಾರೆ.ಫೆಬ್ರವರಿ 8ರಂದು ರಾಮನಗರ ಜಾನಪದ ಲೋಕದಲ್ಲಿ ನಡೆಯುವ ವಿದ್ಯಾರ್ಥಿ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ  ಜಾನಪದ ಲೋಕ ಪ್ರಶಸ್ತಿ ವಿತರಿಸಲಾಗುವುದು. ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ೧೦,೦೦೦ರೂ.  ನಗದು ಒಳಗೊಂಡಿರುತ್ತದೆ.

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ನಿಡಿಯಡ್ಕ ನಿವಾಸಿಯಾದ ಎನ್.ಚನಿಯಪ್ಪ ನಾಯ್ಕ್ ಅವರು ನಿವೃತ್ತ ಅಧ್ಯಾಪಕರೂ, ಖ್ಯಾತ ಹಾಸ್ಯ ಯಕ್ಷಗಾನ ಕಲಾವಿದರೂ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾಗಿ ಸಾಂಸ್ಕೃತಿಕ ವಲಯದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Post a Comment

0 Comments