Ticker

6/recent/ticker-posts

Ad Code

ಪುತ್ತಿಗೆ ಪಂ.ವಿರಾಟ್ ಹಿಂದು ಸಂಗಮಕ್ಕೆ ಅಭೂತಪೂರ್ವ ಸಿದ್ಧತೆ: ಮಹಾ ಸಂಪರ್ಕ ಅಭಿಯಾನ ಪೂರ್ಣ : ಮಾ. 1ಕ್ಕೆ ಬೈಕ್ ರಾಲಿ ಪ್ರಚಾರ


ಸೀತಾಂಗೋಳಿ: ಪುತ್ತಿಗೆ ಪಂಚಾಯತ್ ಮಟ್ಟದ ವಿರಾಟ್ ಹಿಂದು ಸಂಗಮ ಮಾ.8ರಂದು ಸೂರಂಬೈಲು ಶ್ರೀ ಸಾಯಿರಾಮ್ ಭಟ್ ನಗರದಲ್ಲಿ ಜರಗಲಿದ್ದು ಇದರ ಯಶಸ್ವಿಗೆ ಅಭೂತಪೂರ್ವ ಸಿದ್ಧತೆ ನಡೆಯುತ್ತಿದೆ.

ಪಂಚಾಯತಿನ ಪ್ರತಿ ವಾರ್ಡಿನ ಗ್ರಾಮ ಮಟ್ಟದ ಹಿಂದೂ ಬಾಂಧವರ ಮನೆ ಮನೆ ಸಂಪರ್ಕಿಸುವ ಮಹಾ ಸಂಪರ್ಕ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ.


ಪ್ರತಿ ಹಿಂದೂ ಮನೆಗಳಿಗೂ ಆಮಂತ್ರಣ ಪತ್ರಿಕೆ ಹಾಗೂ ಭಗವದ್ವಜ ವಿತರಿಸಿ ಪಂಚಾಯತ್ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.

ವಿರಾಟ್ ಹಿಂದೂ ಸಂಗಮದ ಅಧ್ಯಕ್ಷ,ಧಾರ್ಮಿಕ ಮುಂದಾಳು ಡಿ.ದಾಮೋದರನ್ ನೇತೃತ್ವದಲ್ಲಿ  ಪ್ರತಿ ಸಮಿತಿಗಳು ಭರಧ ಸಿದ್ಧತೆಯಲ್ಲಿ ತೊಡಗಿದ್ದು ಕಾರ್ಯಕರ್ತರು ಉತ್ಸಾಹದಲ್ಲಿ ತಳ‌ಮಟ್ಟದಿಂದಲೇ ಹಿಂದೂ ಬಾಂಧವರ ಐಕ್ಯತೆಗೆ ಕಾರ್ಯವೆಸಗುತ್ತಿರುವುದು ಮಾದರಿಯಾಗಿದೆ. ಮಾ.8 ರ ಹಿಂದೂ ಸಂಗಮದ ಪ್ರಚಾರಾರ್ಥ ಮಾ. 1ರಂದು ಭಾನುವಾರ ಬೃಹತ್  ಬೈಕ್ ರಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10ಗಂಟೆಗೆ ಧರ್ಮತ್ತಡ್ಕದಿಂದ ಆರಂಭವಾಗುವ ಬೈಕ್ ರಾಲಿ ಸೂರಂಬೈಲಿನಲ್ಲಿ ಸಮಾಪ್ತಿಗೊಳ್ಳಲಿದೆ. 

Post a Comment

0 Comments