Ticker

6/recent/ticker-posts

Ad Code

ಅಕ್ರಮ ಗೋಹತ್ಯಾ ಪ್ರಕರಣ - ಆರೋಪಿಯ ಮನೆ ಆವರಣ ಜಪ್ತಿ


ಬೆಳ್ತಂಗಡಿ : ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ, ಮನೆಯೊಂದರ ಆವರಣದಲ್ಲಿ, ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ  ನೀಡಲಾಗಿತ್ತು. ಇದರಂತೆ ಠಾಣೆಯ ಪಿಎಸ್ಐ ಸುತೇಶ್‌ ಕೆ ಪಿ ರವರು ಸಿಬ್ಬಂದಿಗಳೊಂದಿಗೆ  ಸ್ಥಳಕ್ಕೆ ತೆರಳಿ ಕಾರ್ಯಚರಣೆ ನಡೆಸಿದ್ದರು. ಆರೋಪಿ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರ ಮನೆಯ ಬಳಿ ತಲುಪಿದಾಗ, ಮನೆಯ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿಹೋಗಿರುತ್ತಾರೆ. ಈ ಸಂದರ್ಭ ಸ್ಥಳವನ್ನು ಪರಿಶೀಲಿಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಿಡಲಾಗಿದ್ದು, ಸಮೀಪದಲ್ಲಿದ್ದ ಆಟೋ ರಿಕ್ಷಾದಲ್ಲಿಯೂ ಗೋಮಾಂಸದ ಪ್ಯಾಕೆಟ್ ಗಳು ಪತ್ತೆಯಾಗಿತ್ತು. ಒಟ್ಟು 56 ಕೆಜಿ ಮಾಂಸ ಪತ್ತೆಯಾಗಿದ್ದು ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ ಗೋಮಾಂಸ, ತೂಕದ ಯಂತ್ರ, ಅಟೋರಿಕ್ಷಾ, ಮೊಬೈಲ್ ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ  ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು, ಪ್ರಕರಣದ ಆರೋಪಿ ಹೆಚ್‌ ಅಬ್ದುಲ್‌ ರಹಿಮಾನ್‌ ಎಂಬವರು ಜಾನುವಾರುಗಳ ವಧೆಗಾಗಿ ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದೆ.

Post a Comment

0 Comments