Ticker

6/recent/ticker-posts

Ad Code

ಬದಿಯಡ್ಕದಲ್ಲಿ ತೆಂಗಿನ ನಾರಿನ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ

 

ಬದಿಯಡ್ಕ: ನಿರೀಕ್ಷಿಸಿದ ಉದ್ಯೋಗವೇ ಲಭಿಸಬೇಕೆಂದು ಅನೇಕರು ಇಂದು ತಮ್ಮ ಜೀವನದ ಅಮೂಲ್ಯವಾದ ಸಮಯವನ್ನು ಹಾಳುಮಾಡಬಾರದು. ಸ್ವೋದ್ಯೋಗಕ್ಕೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ತೆಂಗಿನ ನಾರಿನ ಉದ್ಯಮದ ಅಭಿವೃದ್ಧಿಗೆ ಕೊಯರ್ ಬೋರ್ಡ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಬದಿಯಡ್ಕ ಗ್ರಾಮಪಂಚಾಯಿತಿನ ಜನತೆಗೆ ಇದು ಉಪಕಾರಪ್ರದವಾಗಲಿ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಹೇಳಿದರು.

ಕೇಂದ್ರ ಎಂ.ಎಸ್.ಎ.ಇ.ಮಿನಿಸ್ಟ್ರಿ ವಿಭಾಗದ ಕೋಯರ್ ಬೋರ್ಡ್ ನೇತೃತ್ವದಲ್ಲಿ ದಿ ನೋರ್ತ್ ಮಲಬಾರ್ ಚೇಂಬರ್ ಆಫ್ ಕೋಮರ್ಸ್ ಕಾಸರಗೋಡು ಚಾಪ್ಟರ್‌ನ ಸಹಯೋಗದೊಂದಿಗೆ ಬದಿಯಡ್ಕ ಗ್ರಾಮಪಂಚಾಯತಿಯ ಮನುಕುಲ ಸಭಾಭವನದಲ್ಲಿ ಜರಗಿದ ಮೂರು ದಿನಗಳ ತೆಂಗಿನ ನಾರಿನ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

 ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡೆಪ್ಯೂಟಿ ರಿಜಿಸ್ಟ್ರಾರ್  ಡಿಐಸಿ ಸಿಂಧು ಪಿ.ಕೆ. ಪ್ರಧಾನ ಭಾಷಣ ಮಾಡಿದರು. ಬ್ಲೋಕ್ ಪಂಚಾಯಿತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಬ್ಲೋಕ್ ಪಂಚಾಯಿತಿ ಸದಸ್ಯರುಗಳಾದ ಮಹೇಶ್ ವಳಕ್ಕುಂಜ, ಖಾದರ್ ಮಾನ್ಯ, ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಪ್ರೋಜೆಕ್ಟ್ ಸಂಚಾಲಕ ಪಿ.ರಮೇಶ್,ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಉಷಾ, ಅನ್ನತ್ ಬೀವಿ, ಶ್ಯಾಮಪ್ರಸಾದ ಸರಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್.ಎಂ.ಸಿ.ಸಿ. ಅಧ್ಯಕ್ಷ ಶ್ಯಾಮ್‌ಪ್ರಸಾದ್ ಎ.ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಯರ್ ಬೋರ್ಡ್ ಅಧಿಕಾರಿ ಶೈಜು ಟಿ.ಕೆ. ಸ್ವಾಗತಿಸಿ, ಎನ್.ಎಂ.ಸಿ.ಸಿ. ಸಂಚಾಲಕ ಪ್ರಸಾದ್ ಮಣಿಯಾಣಿ ವಂದಿಸಿದರು.

Post a Comment

0 Comments