Ticker

6/recent/ticker-posts

Ad Code

ಸ್ಪೈಸ್​ಜೆಟ್ ಇಂಜಿನ್​ ವೈಫಲ್ಯ : ಪೈಲಟ್​ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ: ​

  

ನವದೆಹಲಿ : ಲೇಹ್​ಗೆ ಹೊರಟಿದ್ದ ಸ್ಪೈಸ್​ಜೆಟ್ ಬೋಯಿಂಗ್​ 737 ವಿಮಾನವೊಂದು ಇಂಜಿನ್​ ವೈಫಲ್ಯದಿಂದಾಗಿ ಟೇಕಾಫ್​ ಆದ ಒಂದು ಗಂಟೆಯೊಳಗೆ ಮತ್ತೆ ದೆಹಲಿಗೆ ವಾಪಸ್ಸಾದ ಘಟನೆ ಮಂಗಳವಾರ (ಫೆ.24) ಬೆಳಗ್ಗೆ ನಡೆದಿದೆ.

ಬೋಯಿಂಗ್ 737 ವಿಮಾನದಲ್ಲಿ ಸುಮಾರು 150 ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ. ತಾಂತ್ರಿಕ ದೋಷ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೈಲಟ್​ ತಕ್ಷಣ ಮೇಡೇ ಕರೆ ನೀಡಿದರು. ಶಿಷ್ಟಾಚಾರದ ಪ್ರಕಾರ, ಕೂಡಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​ಗಾಗಿ ಅಗತ್ಯ ತಯಾರಿಯನ್ನು ಮಾಡಿಕೊಳ್ಳಲಾಯಿತು. ಬೆಳಗ್ಗೆ 6.08ಕ್ಕೆ ಟೇಕಾಫ್​ ಆದ ವಿಮಾನ 6.49ಕ್ಕೆ ಹಿಂತಿರುಗಿತು. 

ಈ ಬಗ್ಗೆ ಸ್ಪೈಸ್​ಜೆಟ್​ ವಕ್ತಾರರು  ಫೆಬ್ರವರಿ 24 ರಂದು ದೆಹಲಿಯಿಂದ ಲೇಹ್‌ಗೆ ಹೊರಟ ಸ್ಪೈಸ್‌ಜೆಟ್ ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿದ ನಂತರ ದೆಹಲಿಗೆ ಮರಳಿತು. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದ ಕಾಕ್‌ಪಿಟ್‌ನಲ್ಲಿ ಯಾವುದೇ ಬೆಂಕಿಯ ಸೂಚನೆ ಇರಲಿಲ್ಲ ಎಂದು ಸ್ಪೈಸ್​ಜೆಟ್​ ವಕ್ತಾರರು ತಿಳಿಸಿದ್ದಾರೆ.

Post a Comment

0 Comments