Ticker

6/recent/ticker-posts

Ad Code

ಬೆದ್ರಂಪಳ್ಳದ ಡಾಮಾರ್ ಮಿಕ್ಸಿಂಗ್ ಕೇಂದ್ರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿ ಕಳವು

ಪೆರ್ಲ :  ಬೆದ್ರಂಪಳ್ಳ ಪರಿಸರದಲ್ಲಿ ಪುಡಿಕಳ್ಳರ ಹಾವಳಿ ತೀವ್ರವಾಗಿದ್ದು, ಇಲ್ಲಿನ ಬಾಂಡಿಲ್ ಎಂಬಲ್ಲಿನ ಡಾಮಾರ್ ಮಿಕ್ಸಿಂಗ್ ಕೇಂದ್ರದಲ್ಲಿ ನಿಲ್ಲಿಸಿದ್ದ  ಲಾರಿ ಮತ್ತು ಸಮೀಪದಲ್ಲಿದ್ದ ಜನರೇಟರ್ ನ ಬ್ಯಾಟರಿ ಕಳವುಗೈದಿರುವುದಾಗಿ ದೂರಲಾಗಿದೆ. ಸುಮಾರು ಎರಡು ಲಕ್ಷ ರೂಗಳು ಬೆಲೆ ಬಾಳುವ ಬ್ಯಾಟರಿ ನಷ್ಟವಾಗಿದೆ. ಈ ಬಗ್ಗೆ ಜಾಸ್ಮಿನ್ ಕಂಪೆನಿಯ ಪ್ರಬಂಧಕ ಬದಿಯಡ್ಕ ಪೋಲಿಸರಿಗೆ ದೂರು ನೀಡಿದ್ದಾರೆ. ಬದಿಯಡ್ಕ ಎಸ್.ಐ. ಸವ್ಯಸಾಚಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Post a Comment

0 Comments