ಅಂಗಡಿಮೊಗರು : ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದೊಡಗೂಡಿ ಬಹು ವಿಜೃಂಭಣೆಯಿಂದ ಜರಗಿತು. ಇದರ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ನಾಟ್ಯ ಶಿವ ನೃತ್ಯ ಶಾಲೆ ಕಾಸರಗೋಡು ಇದರ ಸುಜಾತ ಸುದೀಶ್ ಅಶ್ವಿನಿನಗರ ಇವರ ಶಿಷ್ಯೆಯರು ಮತ್ತು ಊರ ಪ್ರತಿಭೆಗಳಿಂದ ನೃತ್ಯ ವೈಭವ, ಅತ್ತಾಳಪೂಜೆ, ರಂಗಪೂಜೆ ಜರಗಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರ ಆಡಳಿತ ಮೊಕ್ತಸರ ಅಡ್ವ. ಬಿ. ಸುಬ್ಬಯ್ಯ ರೈ ಇಚ್ಲಂಪಾಡಿ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಧಾರ್ಮಿಕ ಮುಂದಾಳು ನರಹರಿ ಮಾಸ್ತರ್ ಧಾರ್ಮಿಕ ಭಾಷಣಗೈದರು. ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತ ಎಂ, ಪಂಚಾಯತು ಸದಸ್ಯ ಶಿವಪ್ಪ ರೈ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ. ಆನಂದ ಸ್ವಾಗತಿಸಿ, ಕ್ಷೇತ್ರ ಸೇವಾ ಸಮಿತಿ ಕಾರ್ಯದರ್ಶಿ ಡಿ. ಎನ್. ರಾಧಾಕೃಷ್ಣ ವಂದಿಸಿದರು. ರಾತ್ರಿ ನವಚೇತನ ಯೂತ್ ಕ್ಲಬ್(ರಿ) ಬಾಡೂರು ಇವರಿಂದ ದಿನಕರ ಭಂಡಾರಿ ವಿರಚಿತ "ಮದಿಮೆದ ಇಲ್ಲಡ್..." ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

0 Comments