ಪೆರ್ಲ : ಹಿಂದೂ ಸಂಗಮ ಆಯೋಜನಾ ಸಮಿತಿಯ ನೇತೃತ್ವದಲ್ಲಿ ಎಣ್ಮಕಜೆ ಪಂಚಾಯತು ಹಿಂದೂ ಸಂಗಮ ಫೆಬ್ರವರಿ 22 ಆದಿತ್ಯವಾರದಂದು ಪೆರ್ಲ ಪೇಟೆಯಲ್ಲಿ ನಡೆಯಲಿದೆ. ಅಂದು ಅಪರಾಹ್ನ ಗಂಟೆ 2:30ಕ್ಕೆ ಇಡಿಯಡ್ಕ ದೇವಸ್ಥಾನ ಪರಿಸರದಿಂದ ಸಾಂಸ್ಕೃತಿಕ ಶೋಭಾಯಾತ್ರೆ ಜರಗಲಿದೆ. ಅಪರಾಹ್ನ ಗಂಟೆ 3:30ಕ್ಕೆ ಪೆರ್ಲದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಮಾತಾನಂದಮಯಿ ಆಶೀರ್ವಚನಗೈಯುವರು. ಹಿಂದು ಐಕ್ಯವೇದಿ ಕಾರ್ಯಾಧ್ಯಕ್ಷ ವಲ್ಡನ್ ತಿಲ್ಲಂಗೇರಿ ದಿಕ್ಸೂಚಿ ಭಾಷಣಗೈಯುವರು. ಸಂಜೆ ಗಂಟೆ 6ರಿಂದ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ 'ಗಾನ ಸಂಭ್ರಮ' ಕಾರ್ಯಕ್ರಮ ಜರಗಲಿದೆ.

0 Comments