Ticker

6/recent/ticker-posts

Ad Code

ಅಡ್ಕತ್ತಬೈಲಿನಲ್ಲಿ ಬೆಂಕಿ ಅವಘಡಕ್ಕೆ ತುತ್ತಾದ ಮನೆಗೆ ಧರ್ಮಸ್ಥಳದಿಂದ ಸಹಾಯ ಹಸ್ತ

 

ಕಾಸರಗೋಡು :  ಅಡ್ಕತ್ತಬೈಲು ಕ್ಷೇತ್ರದ ಬೀರಂತಬೈಲು ಪುಷ್ಪಾ ಗಣಪತಿ ಆಚಾರ್ಯರವರ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಹಾನಿಯಾಗಿರುವ ಬಗ್ಗೆ ಸಹಾಯಧನ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಪೂಜ್ಯರು ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಕ್ಷೇತ್ರದಿಂದ ಪ್ರಸಾದ ರೂಪವಾಗಿ ಸಹಾಯಧನವನ್ನು ಮಂಜೂರುಗೊಳಿಸಿರುತ್ತಾರೆ. ಈ ಮಂಜೂರಾತಿ ಪತ್ರವನ್ನು ಸಂತ್ರಸ್ತ ಮನೆಯವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಯೋಜನಾಧಿಕಾರಿ  ದಿನೇಶ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷರಾದ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ನಗರ ಸಭಾ ಕೌನ್ಸಿಲರ್ ಹರೀಶ್ ಕೆ.ಆರ್. ಗ್ರಾಮಾಭಿವೃದ್ಧಿ ಯೋಜನೆಯ  ಮೇಲ್ವಿಚಾರಕರಾದ ಗೋಪಾಲಕೃಷ್ಣ, ಸೇವಾಪ್ರತಿನಿಧಿ  ಶೋಭಾ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments